ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕಿಯ ನಿಧನಕ್ಕೆ ಕಣ್ಣೀರಾದ ಮಿಲ್ಲರ್; ಇದು ಮಿಲ್ಲರ್ ಮಗಳಲ್ಲ- ಹಾಗಾದ್ರೆ ಯಾರು ಈ ಪುಟಾಣಿ?

ನವದೆಹಲಿ: ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟರ್ ಡೇವಿಡ್ ಮಿಲ್ಲರ್ ಅವರು ಶನಿವಾರ ಅತ್ಯಂತ ದುಃಖಕರ ಸುದ್ದಿಯೊಂದನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಗತ್ತಿಗೆ ತಿಳಿಸಿದ್ದರು. ಬಾಲಕಿ ಜೊತೆಗಿರುವ ವಿಡಿಯೋವನ್ನು ಹಂಚಿಕೊಂಡಿದ್ದ ಮಿಲ್ಲರ್, 'ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಮೈ ರಾಕ್‌ಸ್ಟಾರ್, ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದರು.

ಈ ಬಾಲಕಿ ಡೇವಿಡ್ ಮಿಲ್ಲರ್ ಮಗಳು ಎಂದು ಭಾವಿಸಲಾಗಿತ್ತು. ಮಿಲ್ಲರ್ ಅಂತ್ಯಕ್ರಿಯೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬಹುದು ಎಂದು ಕೆಲವರು ಸಾಮಾಜಿಕ ಜಾಲತಾಗಳಲ್ಲಿ ಬರೆದಿದ್ದರು. ಆದರೆ ಇದು ನಿಜವಲ್ಲ. ಮೃತಪಟ್ಟ ಹುಡುಗಿ ಮಿಲ್ಲರ್ ಮಗಳಲ್ಲ. ಆಕೆ ಮಿಲ್ಲರ್‌ಗೆ ತುಂಬಾ ಹತ್ತಿರವಾಗಿದ್ದ ಅಭಿಮಾನಿ ಹಾಗೂ ಆಪ್ತ ಸ್ನೇಹಿತನ ಮಗಳು ಆ್ಯನೆ.

ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆ್ಯನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಕ್ರಿಕೆಟಿಗ ಮಿಲ್ಲರ್ ಅವಳೊಂದಿಗೆ ವಿಶೇಷ ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ಮಿಲ್ಲರ್, ಆ್ಯನೆ ಅವರನ್ನು ಹಲವು ಬಾರಿ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದರು. ಹಾಗಾಗಿ ಕೆಲವರು ಆ್ಯನೆ ಅವರನ್ನು ಮಿಲ್ಲರ್ ಮಗಳು ಎಂದು ಭಾವಿಸಿದ್ದರು. ಆದರೆ ಆಕೆ ಮಿಲ್ಲರ್‌ನ ಆಪ್ತ ಸ್ನೇಹಿತನ ಮಗಳು ಎಂಬುದು ದೃಢಪಟ್ಟಿದೆ.

Edited By : Vijay Kumar
PublicNext

PublicNext

10/10/2022 01:10 pm

Cinque Terre

77.99 K

Cinque Terre

2

ಸಂಬಂಧಿತ ಸುದ್ದಿ