ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಭಾರತ- ದ.ಆಫ್ರಿಕಾ ಕದನ; ಕ್ಲೀನ್ ಸ್ವೀಪ್‌ಗೆ ಟೀಂ ಇಂಡಿಯಾ ಸ್ಕೆಚ್

ಇಂದೋರ್: ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ ಮೊದಲ ಸಲ ಟಿ20 ಸರಣಿ ಗೆದ್ದ ಸಡಗರದಲ್ಲಿರುವ ಭಾರತವೀಗ ಇನ್ನೊಂದು ಹೆಜ್ಜೆ ಮುಂದಿರಿಸಿ ಕ್ಲೀನ್‌ ಸ್ವೀಪ್‌ಗೆ ಸ್ಕೆಚ್ ಹಾಕಿದೆ.

ಇಂದೋರ್‌ನಲ್ಲಿ ಇಂದು (ಮಂಗಳವಾರ) ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಸಣ್ಣ ಮಟ್ಟದ ಪ್ರಯೋಗ ನಡೆಸುವ ಸಾಧ್ಯತೆ ಇದೆ. ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಶ್ರೇಯಸ್ ಅಯ್ಯರ್‌ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ ಭಾರತದ ಬೌಲಿಂಗ್‌ ಪ್ರದರ್ಶನವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಹೊಸ ಪ್ರಯೋಗಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ಲಾನ್ ನಡೆಸಿದ್ದಾರಂತೆ. ಇಂದಿನ ಪಂದ್ಯದಲ್ಲಿ ಉಮೇಶ್‌ ಯಾದವ್‌, ಶಾಬಾಜ್ ಅಹ್ಮದ್‌, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್ ಅವರಲ್ಲಿ ಕೆಲವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

Edited By : Vijay Kumar
PublicNext

PublicNext

04/10/2022 08:28 am

Cinque Terre

57.8 K

Cinque Terre

1

ಸಂಬಂಧಿತ ಸುದ್ದಿ