ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs AUS ಭಾರತಕ್ಕೆ ಭರ್ಜರಿ ಜಯ

ನಾಗ್ಪುರ : ಆಸ್ಟ್ರೇಲಿಯಾ ವಿರುದ್ದದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಸಿಕ್ಸರ್ , ಬೌಂಡರಿ ಮೂಲಕ ಅಬ್ಬರಿಸಿ ಭರ್ಜರಿ ಗೆಲುವು ದಾಖಲಿಸಿದೆ. 8 ಓವರ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು ಸಮಬಲಗೊಳಿಸಿದೆ. ಹಾದು ಇಂದು ನಾಗಪುರ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್​ ಸೋತು ಮೊದಲು ​ ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ನಿಗದಿತ 8 ಓವರ್​​ನಲ್ಲಿ 5 ವಿಕೆಟ್​ ನಷ್ಟಕ್ಕೆ 90 ರನ್​​ ಗಳಿಸಿತು.

ಇನ್ನು, ಆಸಿಸ್​​​ ನೀಡಿದ ಬೃಹತ್​ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ಕ್ಯಾಪ್ಟನ್​​ ರೋಹಿತ್​​ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಕೇವಲ 20 ಬಾಲ್​​ನಲ್ಲಿ 46 ರನ್​ ಸಿಡಿಸಿ ಭಾರತವನ್ನು ಗೆಲ್ಲಿಸಿದ್ರು. ಕೊನೆಗೆ ಬಂದ ದಿನೇಶ್​ ಕಾರ್ತಿಕ್​​​​ 1 ಸಿಕ್ಸರ್​​, 1 ಫೋರ್​ ಸಿಡಿಸಿದ್ರು. ಭಾರತ 7.4 ಓವರ್​​​ಗೆ 4 ವಿಕೆಟ್​ ನಷ್ಟಕ್ಕೆ 92 ರನ್​​ ಗಳಿಸಿ ಗೆದ್ದು ಬೀಗಿದೆ.

Edited By : Nirmala Aralikatti
PublicNext

PublicNext

23/09/2022 11:19 pm

Cinque Terre

37.49 K

Cinque Terre

2

ಸಂಬಂಧಿತ ಸುದ್ದಿ