ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs AUS T20 : ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ

ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯವನ್ನು ಮಳೆ ಕಾಡಿದೆ. ಹಲವು ಬಾರಿ ಮುಂದೂಡಲಾದ ಪಂದ್ಯ ಅಂತಿಮವಾಗಿ 9.30ಕ್ಕೆ ಆರಂಭವಾಗಿದೆ. ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಆದರೆ, ಮಳೆಯ ಕಾರಣ, ಪಂದ್ಯ 8 ಓವರ್‌ಗಳಿಗೆ ಮಿತಿಗೊಂಡಿದೆ.

ಮೊದಲ ಇನ್ನಿಂಗ್ಸ್‌ 9.30ಕ್ಕೆ ಆರಂಭವಾಗಿ 10.04ಕ್ಕೆ ಅಂತ್ಯವಾಗಬೇಕು. 10.04 ರಿಂದ 10.14ರ ವರೆಗೆ ಇಂಟರ್ವಲ್‌ ಇರಲಿದೆ. ಎರಡನೇ ಇನ್ನಿಂಗ್ಸ್‌ 10.14 ರಿಂದ 10.48 ರ ವರೆಗೆ ನಡೆಯಲಿದೆ. ಎರಡು ಓವರ್‌ಗಳ ಪವರ್‌ ಪ್ಲೇ ಇರಲಿದೆ. ಒಬ್ಬ ಬೌಲರ್‌ಗೆ ಗರಿಷ್ಠ 2 ಓವರ್‌ ನೀಡಲಾಗುತ್ತದೆ. ನಿಧಾನ ಗತಿಯ ಬೌಲಿಂಗ್‌ಗೆ ದಂಡ ಇಲ್ಲ. ಡ್ರಿಂಕ್ಸ್‌ ಬ್ರೇಕ್‌ ಅನ್ನೂ ತೆಗೆದು ಹಾಕಲಾಗಿದೆ.

ಇನ್ನು ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ರಿಷಭ್‌ ಪಂತ್‌ ಮತ್ತು ಜಸ್ಪ್ರೀತ್‌ ಬುಮ್ರಾಗೆ ಈ ಬಾರಿ ತಂಡದಲ್ಲಿ ಸ್ಥಾನ ದೊರೆತಿದೆ. ದಿನೇಶ್‌ ಕಾರ್ತಿಕ್‌ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭುವೇನಶ್ವರ್‌ ಕುಮಾರ್‌ ಅವರನ್ನು ತಂಡದಿಂದ ಕೈಬಿಡಲಾಗಿದ.

ಟೀಂ ಇಂಡಿಯಾ: ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ರಿಷಭ್‌ ಪಂತ್ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್, ಅಕ್ಷರ್‌ ಪಟೇಲ್, ಹರ್ಷಲ್‌ ಪಟೇಲ್, ಯಜುವೇಂದ್ರ ಚಾಹಲ್, ಜಸ್ಪ್ರಿತ್‌ ಬುಮ್ರಾ

Edited By : Nirmala Aralikatti
PublicNext

PublicNext

23/09/2022 09:43 pm

Cinque Terre

48.85 K

Cinque Terre

0

ಸಂಬಂಧಿತ ಸುದ್ದಿ