ನವದೆಹಲಿ: ಐಪಿಎಲ್ 2023ನಲ್ಲಿ ತಂಡಗಳು ತಮ್ಮ ತಮ್ಮ ತವರು ಮೈದಾನದಲ್ಲಿ ಅರ್ಧದಷ್ಟು ಪಂದ್ಯಗಳನ್ನ ಮತ್ತು ಇತರ ತಂಡಗಳ ತವರು ಮೈದಾನದಲ್ಲಿ ಅರ್ಧದಷ್ಟು ಪಂದ್ಯಗಳನ್ನ ಆಡಲಿವೆ. ಮತ್ತೊಂದು ವಿಶೇಷ ಸಂಗತಿ ಎಂದರೆ 2023 ಆರಂಭದಲ್ಲೇ ಮಹಿಳಾ ಐಪಿಎಲ್ ಆರಂಭವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಮುಂದಿನ ಆವೃತ್ತಿಯಿಂದ(2023) ಐಪಿಎಲ್ ಟೂರ್ನಿಯು ಹಳೆಯ ಸಾಂಪ್ರದಾಯದಂತೆ ತವರು ಹಾಗೂ ಹೊರಗಿನ ಸ್ವರೂಪದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಒಟ್ಟು 10 ತಂಡಗಳು ತನ್ನ ತವರು ಮೈದಾನ ಹಾಗೂ ಹೊರಗಡೆ ಮೈದಾನಗಳಲ್ಲಿ ಕಾದಾಟ ನಡಸಲಿವೆ" ಎಂದು ಹೇಳಿದ್ದಾರೆ.
ಅದರಂತೆ ಕಳೆದ ಮೂರು ವರ್ಷಗಳಿಂದ ಉದ್ಯಾನ ನಗರಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬರುವ ವರ್ಷದಿಂದ ಐಪಿಎಲ್ ಹಂಗಾಮ ಮತ್ತೆ ಶುರುವಾಗಲಿದೆ. ಈ ಮೂಲಕ ಆರ್‌ಸಿಬಿ ಅಭಿಮಾನಿಗಳು ಸ್ಟೇಡಿಯಂ ಗ್ಯಾಲರಿಯಲ್ಲಿ ಕುಳಿತು ತಮ್ಮ ನೆಚ್ಚಿನ ಬೆಂಗಳೂರು ತಂಡದ ಪಂದ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
PublicNext
22/09/2022 06:11 pm