ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಟಿ20 ವೃತ್ತಿಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎಡಗೈ ಬ್ಯಾಟರ್ ಒಟ್ಟು 111 ರನ್ ಗಳಿಸಿದ್ದರು. ಇದರೊಂದಿಗೆ ಎರಡನೇ ರ‍್ಯಾಂಕಿಂಗ್ ಗೆ ಲಗ್ಗೆ ಇಟ್ಟಿದ್ದಾರೆ.
ಐಸಿಸಿ ಪ್ರಕಟಿಸಿದ ರ‍್ಯಾಂಕ್ ಪಟ್ಟಿಯಲ್ಲಿ ವಿಶ್ವದ ಬ್ಯಾಟರ್ಗಳ ಪೈಕಿ 2ನೇ ಸ್ಥಾನ ಪಡೆದುಕೊಂಡಿದ್ದು, ಏಕದಿನ ಕ್ರಿಕೆಟ್ ನಲ್ಲಿ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟರ್ ಬೆತ್ ಮೂನಿ 743 ಶ್ರೇಯಾಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, 731 ಶ್ರೇಯಾಂಕಗಳನ್ನು ಗಳಿಸಿರುವ ಸ್ಮೃತಿ ಮಂಧಾನ 2ನೇ ಸ್ಥಾನದಲ್ಲಿ ಮಿಂಚಿದ್ದಾರೆ.
ಇನ್ನೂ ಏಕದಿನ ಕ್ರಿಕೆಟ್ ನಲ್ಲಿ 13ನೇ ಸ್ಥಾನದಲ್ಲಿದ್ದ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 9ನೇ ಸ್ಥಾನಕ್ಕೆ ಜಿದ್ದಾರೆ. ಆಲ್ರೌಂಡರ್ ದೀಪ್ತಿ ಶರ್ಮಾ 33 ರಿಂದ 32ನೇ ಸ್ಥಾನಕ್ಕೆ ಹಾಗೂ ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ 45 ರಿಂದ 37ನೇ ಸ್ಥಾನಕ್ಕೇರಿದ್ದಾರೆ. ಬೌಲರ್ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದ ದೀಪ್ತಿ 12ನೇ ಸ್ಥಾನಕ್ಕೆ ಜಿಗಿದು ಸಾಧನೆ ಮಾಡಿದ್ದಾರೆ.
ಟಿ20 ಬ್ಯಾಟರ್ ಗಳ ಶ್ರೇಯಾಂಕದಲ್ಲಿ ಹರ್ಮನ್ ಪ್ರೀತ್ ಕೌರ್ 14ನೇ ಸ್ಥಾನಕ್ಕೆ, ಬೌಲಿಂಗ್ ನಲ್ಲಿ ರೇಣುಕಾ ಸಿಂಗ್ 10ನೇ ಸ್ಥಾನಕ್ಕೆ ಹಾಗೂ ರಾಧಾ ಯಾದವ್ 14ನೇ ಸ್ಥಾನಕ್ಕೆ ಜಿಗಿದರೇ, ಆಲ್ರೌಂಡರ್ ವಿಭಾಗದಲ್ಲಿ ಸ್ನೇಹಾ ರಾಣಾ ಹಾಗೂ ಪೂಜಾ ವಸ್ತ್ರಕರ್ ಇಬ್ಬರೂ 41ನೇ ಸ್ಥಾನ ಹಂಚಿಕೊಂಡಿದ್ದಾರೆ.
PublicNext
20/09/2022 10:46 pm