ಮೊಹಾಲಿ: ಆರಂಭದಲ್ಲಿ ಕ್ಯಾಮೆರಾನ್ ಗ್ರೀನ್ ಅಬ್ಬರದ ಅರ್ಧಶತಕ, ಕೊನೆಯಲ್ಲಿ ಮ್ಯಾಥ್ಯೂ ವೇಡ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಇಂದು ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ದಾಖಲಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 4 ಎಸೆತಗಳು ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆದ್ದು ಬೀಗಿದೆ.
ಆಸ್ಟ್ರೇಲಿಯಾ ಪರ ಕ್ಯಾಮೆರಾನ್ ಗ್ರೀನ್ 61 ರನ್ (30 ಎಸೆತ), ಮ್ಯಾಥ್ಯೂ ವೇಡ್ 45 ರನ್ (21 ಎಸೆತ) ಹಾಗೂ ಸ್ಟೀವನ್ ಸ್ಮಿತ್ 35 ರನ್ ಗಳಿಸಿದರು. ಇದಕ್ಕೂ ಮುನ್ನ ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಅಜೇಯ 71 ರನ್ (30 ಎಸೆತ), ಕೆ.ಎಲ್.ರಾಹುಲ್ 55 ರನ್ (35 ಎಸೆತ), ಸೂರ್ಯಕುಮಾರ್ ಯಾದವ್ 46 ರನ್ (25 ಎಸೆತ) ಹಾಗೂ ನಾಯಕ ರೋಹಿತ್ ಶರ್ಮಾ 11 ರನ್ ಗಳಿಸಿದ್ದರು.
PublicNext
20/09/2022 10:39 pm