ನವದೆಹಲಿ: ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ್ದ ಯುವರಾಜ್‌ರ ಆ ಸ್ಮರಣೀಯ ಇನ್ನಿಂಗ್ಸ್‌ಗೆ ಇಂದಿಗೆ (ಸೆ.19) ಸರಿಯಾಗಿ 15 ವರ್ಷ ತುಂಬಿದೆ. ಈ ಅದ್ಭುತ ಕ್ಷಣವನ್ನು ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ತಮ್ಮ ಏಳು ತಿಂಗಳ ಮಗ ಓರಿಯನ್ ಜೊತೆಗೆ ಕುಳಿತು ವೀಕ್ಷಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯುವಿ, "ಕಳೆದ 15 ವರ್ಷಗಳಿಂದ ಈ ಕ್ಷಣವನ್ನು ಒಟ್ಟಿಗೆ ಕುಳಿತು ನೋಡಲು ಇಂತಹ ಉತ್ತಮ ಪಾರ್ಟನರ್ ಸಿಕ್ಕಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
2007ರ ಸೆಪ್ಟೆಂಬರ್ 19ರಂದು ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಯುವರಾಜ್ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು.
PublicNext
19/09/2022 06:42 pm