ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 World Cupಗಾಗಿ ಟೀಂ ಇಂಡಿಯಾಗೆ ಹೊಸ ಜೆರ್ಸಿ

ಮುಂಬೈ: ಮುಂದಿನ ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಹೊಸ ಸಮವಸ್ತ್ರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಅನಾವರಣಗೊಳಿಸಿದೆ.

ಟಿ20 ವಿಶ್ವಕಪ್‌ಗೂ ಮುನ್ನ ರೋಹಿತ್ ಶರ್ಮಾ ನೇತೃತ್ವದ ಪಡೆಯು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಬೇಕಿದೆ. ಇನ್ನು ಟಿ20 ವಿಶ್ವಕಪ್‌ಗಾಗಿ ಬಿಡುಗಡೆಗೊಂಡ ಜೆರ್ಸಿ ಹಿಂದಿನ ಜೆರ್ಸಿಗಿಂತ ತುಂಬಾ ಭಿನ್ನವಾಗಿದೆ. ಕಳೆದ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಧರಿಸಿದ್ದ ಜೆರ್ಸಿಗೂ ಈ ಜೆರ್ಸಿಯ ಬಣ್ಣಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಕಿಟ್ ಪ್ರಾಯೋಜಕತ್ವ ಹೊಂದಿರುವ ಎಂಪಿಎಲ್ ಸ್ಪೋರ್ಟ್ ಸಹಯೋಗದಲ್ಲಿ ಬಿಸಿಸಿಐ, ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡದ ಜೆರ್ಸಿ ಅನಾವರಣಗೊಳಿಸಿದೆ. ಇದಕ್ಕೆ 'ಒನ್ ಬ್ಲೂ ಜೆರ್ಸಿ' ಎಂದು ಹೆಸರಿಸಲಾಗಿದೆ. ಇದು ನೀಲಿ ಹಾಗೂ ಕಡುನೀಲಿ ಬಣ್ಣದ ಮಿಶ್ರಣವನ್ನು ಹೊಂದಿದೆ.

Edited By : Vijay Kumar
PublicNext

PublicNext

18/09/2022 10:01 pm

Cinque Terre

46.45 K

Cinque Terre

0

ಸಂಬಂಧಿತ ಸುದ್ದಿ