ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಅಭಿಮಾನಿಗಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಆರ್ ಅಶ್ವಿನ್

ಚೆನ್ನೈ: ಟೀಂ ಇಂಡಿಯಾ ಮಾಂತ್ರಿಕ ಸ್ಪಿನ್ನರ್ ಆರ್ ಅಶ್ವಿನ್ ಅವರು ಅಭಿಮಾನಿಗಳೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಟಿ-20 ವಿಶ್ವಕಪ್‌ಗೆ ಆಯ್ಕೆಯಾದ ಬೆನ್ನಲ್ಲೇ ಅಶ್ವಿನ್ ಪಾಸಿಟಿವ್ ಆಗಿ ಸುದ್ದಿಯಾಗಿದ್ದಾರೆ.

ಗಲ್ಲಿ ಕ್ರಿಕೆಟ್​ ಆಡಿದ ಅಶ್ವಿನ್​, ಬೌಲಿಂಗ್​ ಮಾಡೋ ಮೂಲಕ ಗಮನ ಸೆಳೆದಿದ್ದಾರೆ. ಅಶ್ವಿನ್​ ಸೇರಿ 10 ಜನರು ಕ್ರಿಕೆಟ್​​ ಆಡ್ತಿರೋ ವಿಡಿಯೋ ಈಗ ವೈರಲ್​ ಆಗ್ತಿದೆ. 2022 ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲೂ ರಾಜಸ್ತಾನ್​​ ರಾಯಲ್ಸ್​​ ತಂಡದ ಪರ ಸ್ಟಾರ್​​​ ಆಲ್​​ರೌಂಡರ್​​​ ಆರ್​​. ಅಶ್ವಿನ್​​​ ಬ್ಯಾಟಿಂಗ್​​, ಬೌಲಿಂಗ್​​ ವಿಭಾಗದಲ್ಲೂ ಮಿಂಚಿದ್ದರು. ಬಳಿಕ ಇತ್ತೀಚೆಗೆ ನಡೆದ ಏಷ್ಯಾಕಪ್​​ ಆಯ್ಕೆಯಾಗಿದ್ದ ಆರ್​​. ಅಶ್ವಿನ್, ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

16/09/2022 10:27 pm

Cinque Terre

46.72 K

Cinque Terre

1

ಸಂಬಂಧಿತ ಸುದ್ದಿ