ಏಷ್ಯಾಕಪ್ ಫೈನಲ್ : ಏಷ್ಯಾಕಪ್ 2022ರ ಟ್ರೋಫಿಗೆ ಶ್ರೀಲಂಕಾ ಮುತ್ತಿಕ್ಕಿದೆ. ದುಬೈ : ಹದಗೆಟ್ಟ ರಾಜಕೀಯ ಪರಿಸ್ಥಿತಿಯ ಕಾರಣದಿಂದಾಗಿ ಸುದ್ದಿಯಾಗಿದ್ದ ಶ್ರೀಲಂಕಾದಲ್ಲಿ ಸದ್ಯ ಸಂಭ್ರಮ ಮನೆ ಮಾಡಿದೆ. ಹೌದು ಏಷ್ಯಾಕಪ್ 2022ರ ಟ್ರೋಫಿಗೆ ಶ್ರೀಲಂಕಾ ಮುತ್ತಿಕ್ಕಿದೆ. ಈ ಮೂಲಕ ಲಂಕಾದಲ್ಲಿ ಸಂಭ್ರಮ ಹೆಚ್ಚಿದೆ.
ಪ್ರಮೋದ್ ಮದುಶಾನ್ ಹಾಗೂ ವಾನಿಂದು ಹಸರಂಗ ಸ್ಪಿನ್ ದಾಳಿಗೆ ಬೆಂಡಾದ ಪಾಕಿಸ್ತಾನ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಶರಣಾಗಿದೆ. ಅದರೊಂದಿಗೆ ಶ್ರೀಲಂಕಾ ಟಿ20 ಮಾದರಿಯಲ್ಲಿ ಮೊಟ್ಟಮೊದಲ ಏಷ್ಯಾಕಪ್ ಗೆಲುವು ಕಂಡಿದ್ದು, ಒಟ್ಟಾರೆಯಾಗಿ ಶ್ರೀಲಂಕಾದ 6ನೇ ಏಷ್ಯಾಕಪ್ ಗೆಲುವು ಎನಿಸಿದೆ.
ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ದಸನ್ ಶನಕ ನೇತೃತ್ವದ ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟವೇರಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ಮಣಿಸಿದ ಶ್ರೀಲಂಕಾ ತಂಡ ಮೊಟ್ಟಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಏಷ್ಯಾಕಪ್ ಚಾಂಪಿಯನ್ ಆಗಿದೆ.
ಒಟ್ಟಾರೆಯಾಗಿ ಶ್ರೀಲಂಕಾ ತಂಡ 6ನೇ ಏಷ್ಯಾಕಪ್ ಗೆಲುವು ಇದಾಗಿದ್ದು, 2014ರ ನಂತರ ಮೊದಲ ಏಷ್ಯಾಕಪ್ ಗೆಲುವು ಎನಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ ತಂಡ 1986, 1997, 2004, 2008 ಹಾಗೂ 2014ರಲ್ಲಿ ಚಾಂಪಿಯನ್ ಪಟ್ಟವೇರಿತ್ತು. ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಭಾನುಕ ರಾಜಪಕ್ಸ ಗಮನಸೆಳೆದು ಶ್ರೀಲಂಕಾ ತಂಡ 170 ರನ್ ಪೇರಿಸಲು ನೆರವಾಗಿದ್ದರು. ಬಳಿಕ ಬೌಲಿಂಗ್ ನಲ್ಲಿ ಪ್ರಮೋದ್ ಮದುಶಾನ್ ಹಾಗೂ ವಾನಿಂದು ಹಸರಂಗ ತಮ್ಮ ನಡುವೆ ಏಳು ವಿಕೆಟ್ ಗಳನ್ನು ಹಂಚಿಕೊಳ್ಳುವ ಮೂಲಕ ಶ್ರೀಲಂಕಾ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದರು. ಉಳಿದಂತೆ ಸ್ಪಿನ್ನರ್ ಮಹೇಶ್ ತೀಕ್ಷಣ ಹಾಗೂ ವೇಗಿ ಚಾಮಿಕ ಕರುಣರತ್ನೆ ವಿಕೆಟ್ ಉರುಳಿಸಿದರು.
PublicNext
11/09/2022 11:28 pm