ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ್ : ಶಿರಸಿಯ ರಕ್ಷಿತ್‌ಗೆ ಎರಡು ಬೆಳ್ಳಿ

ಕಾರವಾರ : ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ್ ಅಂಗವಾಗಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಜರುಗಿದ 33ನೇ ದಕ್ಷಿಣ ಭಾರತದ ಕ್ರೀಡಾಕೂಟದ 20 ವರ್ಷದ ಒಳಗಿನ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಕ್ಷಿತ್ ರವೀಂದ್ರ 400 ಮೀಟರ್ ಹರ್ಡಲ್ಸ್ ಮತ್ತು 400 ಮೀಟರ್ ಮಿಕ್ಸ್ಡ್ ರಿಲೇ ಎರಡೂ ಸ್ಪರ್ಧೆಯಲ್ಲಿಯೂ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ.

ರಕ್ಷಿತ್, ಬೆಂಗಳೂರಿನ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ಒಲಂಪಿಯನ್ ಅಶ್ವಿನಿ ಅಕ್ಕುಂಜಿಯವರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾನೆ.

ಸಚಿವ ಹೆಬ್ಬಾರ್ ಹಾರೈಕೆ: ರಕ್ಷಿತ್ ಸಾಧನೆಯಿಂದಾಗಿ ಜಿಲ್ಲೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಧಕ್ಕಿದೆ ಎಂದು ಕಾರ್ಮಿಕ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಯುವ ಪ್ರತಿಭಾವಂತ ಕ್ರೀಡಾಪಟು ರಕ್ಷಿತ್ ರವೀಂದ್ರ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರ ಮುಂದಿನ ಕ್ರೀಡಾ ಭವಿಷ್ಯಯು ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತೇನೆ ಎಂದು ಅವರು ಈ ವೇಳೆ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

11/09/2022 08:36 pm

Cinque Terre

37.41 K

Cinque Terre

2