ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾ ಸತತ 2ನೇ ಸೋಲು ಕಂಡಿದೆ. ಇದರಿಂದ ಟೀಂ ಇಂಡಿಯಾದ ಏಷ್ಯಾಕಪ್ ಹೋರಾಟ ಆಫ್ಘಾನಿಸ್ತಾನದ ಪ್ರದರ್ಶದನ ಮೇಲೆ ನಿಂತಿದೆ. ಲಂಕಾ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ.
ಹೌದು ಇಂದು ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಗೆದ್ದು ಬೀಗಿದೆ.
ಟೀಂ ಇಂಡಿಯಾ ನೀಡಿದ ಗುರಿ ಬೆನ್ನತ್ತಿದ ಲಂಕಾ 19.5 ಓವರ್ಗೆ 4 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿ ಗೆದ್ದಿದೆ. ಶ್ರೀಲಂಕಾ ಪರ ಉತ್ತಮ ಬ್ಯಾಟಿಂಗ್ ಮಾಡಿದ ನಿಸ್ಸಾಂಕ 52, ಕುಸಲ್ ಮೆಂಡೀಸ್ 57, ಶನಕ 33, ಭಾನುಕ ರಾಜಪಕ್ಷ 25 ರನ್ ಗಳಿಸಿದ್ರು.ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಓಪನರ್ ಆಗಿ ಬಂದ ಕೆ.ಎಲ್ ರಾಹುಲ್ 6 ರನ್ ಗೆ ಔಟ್ ಆದ್ರು. ನಂತರ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಡಕೌಟ್ ಆದ್ರು.
ಕೊನೆಯವರೆಗೂ ಕ್ರೀಸ್ ನಲ್ಲಿ ನಿಂತ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ 41 ಬಾಲ್ ನಲ್ಲಿ 4 ಸಿಕ್ಸರ್, 5 ಫೋರ್ ಸಮೇತ 72 ರನ್ ಗಳಿಸಿದ್ರು.
ಸೂರ್ಯಕುಮಾರ್ ಯಾದವ್ 34, ಹಾರ್ದಿಕ್ ಪಾಂಡ್ಯ 17, ರಿಷಭ್ ಪಂತ್ 17, ಅಶ್ವಿನ್ 15 ರನ್ ಗಳಿಸಿದ್ರು. ಟೀಂ ಇಂಡಿಯಾ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ಗೆ 173 ರನ್ ಗಳಿಸಿತ್ತು.
PublicNext
06/09/2022 11:38 pm