ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯೂಯಾರ್ಕ್ : ಟೆನಿಸ್ ಜಗತ್ತಿಗೆ ಗುಡ್ ಬೈ ಹೇಳಿದ 24 ಗ್ರ್ಯಾನ್‌ ಸ್ಲಾಮ್ ವಿಜೇತೆ ಸೆರೆನಾ ವಿಲಿಯಮ್ಸ್

ನ್ಯೂಯಾರ್ಕ್ : ವಿಶ್ವ ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕ ದೇಶದ ಸೆರೆನಾ ವಿಲಿಯಮ್ಸ್ ಟೆನಿಸ್‌ ಜಗತ್ತಿಗೆ ವಿದಾಯ ಹೇಳಿದ್ದಾರೆ.

ಹೌದು ! ಅಮೆರಿಕನ್ ಓಪನ್ ಗ್ರ್ಯಾನ್‌ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೋಲಿನ ಬಳಿಕ ಅವರು ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, 46ನೇ ರ್‍ಯಾಂಕ್ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾನೊವಿಚ್ ವಿರುದ್ಧ 7-5, 6-7(4), 6-1ರ ಅಂತರದಲ್ಲಿ ಪರಾಭವಗೊಂಡರು.

ಮೊದಲ ಸೆಟ್‌ ಕಳೆದುಕೊಂಡ ಸೆರೆನಾ ದ್ವಿತೀಯ ಸೆಟ್‌ ಟೈ-ಬ್ರೇಕರ್‌ನಲ್ಲಿ ಗೆದ್ದು ಭರ್ಜರಿ ಪುನರಾಗಮನ ಮಾಡಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿ ಸೋಲು ಕಂಡರು.

40 ವರ್ಷದ ಸೆರೆನಾ ವಿಲಿಯಮ್ಸ್ ಈವರೆಗೆ ಒಟ್ಟು 24 ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ಮೂಲಕ ಆಧುನಿಕ ಟೆನಿಸ್ ಲೋಕದ ರಾಣಿ ಎನಿಸಿದ್ದಾರೆ.

ಟೆನಿಸ್ ವೃತ್ತಿ ಜೀವನದಲ್ಲಿ ವಿವಾದ ಸೇರಿದಂತೆ ಹಲವು ಏಳು-ಬೀಳುಗಳನ್ನು ಕಂಡಿರುವ ಸೆರೆನಾ, ತಲಾ ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್, ಆರು ಬಾರಿ ಅಮೆರಿಕನ್ ಓಪನ್ ಮತ್ತು ಮೂರು ಸಲ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

Edited By :
PublicNext

PublicNext

03/09/2022 02:12 pm

Cinque Terre

43.95 K

Cinque Terre

1