ಟೀಮ್ ಇಂಡಿಯಾ ಮಾಜಿ ಕಪ್ತಾನ್ ವಿರಾಟ್ ಕೊಹ್ಲಿ ಈಗ ದೆಹಲಿ ಬಿಟ್ಟು ಮುಂಬೈಗೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ ಎಂಬ ಸಂಗತಿ ಕೇಳಿ ಬರುತ್ತಿದೆ.
ಹೌದು ! ಗಣೇಶ ಚತುರ್ಥಿಯ ಒಂದು ದಿನ ಮೊದಲು ಅಂದರೆ ಆಗಸ್ಟ್ 30 ರಂದು ಕ್ರಿಕೆಟರ್ ವಿರಾಟ್ ಕೊಹ್ಲಿ ಪರವಾಗಿ ಅವರ ಸಹೋದರ ವಿಕಾಸ್ ಕೊಹ್ಲಿ ಮುಂಬೈ ಪಕ್ಕದ ಆಲಿಬಾಗ್ ಪ್ರದೇಶದಲ್ಲಿ 8 ಎಕರೆ ಭೂಮಿಯನ್ನು ಖರೀದಿಸಿ ವಿರಾಟ್ ಕೊಹ್ಲಿ ಐಷಾರಾಮಿ ಫಾರ್ಮ್ ಹೌಸ್ ನಿರ್ಮಾಣಕ್ಕೆ ಆಲೋಚಿಸಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಅಜಿತ್ ಅಗರ್ಕರ್, ರೋಹಿತ್ ಶರ್ಮಾ ಕೂಡ ಆಲಿಬಾಗ್‌ನಲ್ಲಿ ಭೂಮಿ ಖರೀದಿಸಿದ್ದು ಹಳೇಯ ಸಂಗತಿ.
ಆಲಿಬಾಗ್ ಮುಂಬೈಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಇಲ್ಲಿ ಪ್ರಕೃತಿ ಸೌಂದರ್ಯ ಅದ್ಭುತವಾಗಿದೆ. ಅನೇಕ ಸಿನಿಮಾ ತಾರೆಯರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಇಲ್ಲಿ ಭೂಮಿ ಹೊಂದಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಫಾರ್ಮ್ ಹೌಸ್‌ಗಾಗಿ ಈ ಸ್ಥಳವನ್ನು ತುಂಬಾ ಇಷ್ಟಪಟ್ಟು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಸದ್ಯ ದುಬೈನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದು ಆರು ತಿಂಗಳ ಹಿಂದೆ ಈ ಜಮೀನು ನೋಡಿದ್ದ ವಿರುಷ್ಕಾ ಜೋಡಿ ಈಗ ಆ ಜಮೀನು ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಪವರ್ ಆಫ್ ಅಟಾರ್ನಿ ಪಡೆದು ಅವರ ಸಹೋದರ ವಿಕಾಸ್ ಕೊಹ್ಲಿ ಅವರು 19 ಕೋಟಿ 24 ಲಕ್ಷ 50 ಸಾವಿರಕ್ಕೆ ಡೀಲ್ ಪಡೆದು ಮಂಗಳವಾರ 1 ಕೋಟಿ 15 ಲಕ್ಷ 45 ಸಾವಿರ ಸ್ಟ್ಯಾಂಪ್ ಡ್ಯೂಟಿ ಪಾವತಿಸಿ ಭೂಮಿಯನ್ನು ವಿರಾಟ್ ಕೊಹ್ಲಿ ಹೆಸರಿಗೆ ಮಾಡಿಸಿದ್ದಾರೆ. ಈ ಸಂಪೂರ್ಣ ಒಪ್ಪಂದವನ್ನು ಸಮೀರ ಹ್ಯಾಬಿಟಾಟ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಮೂಲಕ ಪೂರ್ಣಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
PublicNext
02/09/2022 12:05 pm