ದುಬೈ: ಏಷ್ಯಾ ಕಪ್ 2022ರ ಭಾಗವಾಗಿ ಇಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಹಾಂಗ್‌ಕಾಂಗ್ ಮುಖಾಮುಖಿಯಾಗಲಿವೆ.
ಆಗಷ್ಟ 28ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಇನ್ನು ಇಂದಿನ ಪಂದ್ಯದಲ್ಲಿ ಗೆದ್ದರೆ ಸೂಪರ್-4 ಹಂತಕ್ಕೇರಲಿದೆ. ಹಾಂಗ್ ಕಾಂಗ್ ಹಾಗೂ ಭಾರತ ತಂಡಗಳು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್ನಲ್ಲಿ ಮುಖಾಮುಖಿಯಾಗುತ್ತಿವೆ. ಆದರೆ ಉಭಯ ತಂಡಗಳು 2 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು.
PublicNext
31/08/2022 12:18 pm