ದುಬೈ: ಮೊಸದ್ದೆಕ್ ಹೊಸೈನ್ ಹಾಗೂ ಮಹಮ್ಮದುಲ್ಲಾ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಬಾಂಗ್ಲಾದೇಶದ ತಂಡವು ಅಫ್ಘಾನಿಸ್ತಾನ ತಂಡಕ್ಕೆ 128 ರನ್‌ಗಳ ಸಾಧಾರಣ ಮೊತ್ತ ಗುರಿ ನೀಡಿದೆ.
ಏಷ್ಯಾ ಕಪ್ 2022ರ ಟೂರ್ನಿಯ ಭಾಗವಾಗಿ ಶಾರ್ಜಾ ಮೈದಾನದಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿ 7 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ. ತಂಡದ ಪರ ಮೊಸದ್ದೆಕ್ ಹೊಸೈನ್ 48 ರನ್ ಹಾಗೂ ಮಹಮ್ಮದುಲ್ಲಾ 25 ರನ್ ಗಳಿಸಿದರು.
PublicNext
30/08/2022 09:30 pm