ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನನ್ನೊಟ್ಟಿಗೆ ಮಾತನಾಡಲು ನಿಮಗೆ ಸಮಸ್ಯೆ ಏನೂ ಇಲ್ಲ ತಾನೆ?'; ಜಡೇಜಾಗೆ ಮಾಂಜ್ರೇಕರ್ ಹೀಗೆ ಕೇಳಿದ್ಯಾಕೆ?

ದುಬೈ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್‌ 2022 ಟೂರ್ನಿಯ ಗ್ರೂಪ್‌ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಜಯ ದಾಖಲಿಸಿತು. ಬಳಿಕ ಪೋಸ್ಟ್‌ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾಜಿ ಕ್ರಿಕೆಟಿಗ ಹಾಗೂ ಜನಪ್ರಿಯ ಕಾಮೆಂಟೇಟರ್ ಸಂಜಯ್‌ ಮಾಂಜ್ರೇಕರ್ ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಕಾಲೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಜಯ್‌ ಮಾಂಜ್ರೇಕರ್ ಅವರು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಆಯ್ಕೆಯನ್ನು ಪದೇ ಪದೇ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ ಸಾಮರ್ಥ್ಯವನ್ನು ಮೇಲಿಂದ ಮೇಲೆ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಇಬ್ಬರ ನಡುವೆ ಟ್ವೀಟ್ ವಾರ್ ಕೂಡ ಆಗಿದ್ದುಂಟು. ಅದರಲ್ಲೂ ಜಡ್ಡು ತಮ್ಮ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದ ಮೂಲಕ ಮಾಂಜ್ರೇಕರ್ ಟೀಕೆಗಳಿಗೆ ಉತ್ತರ ಕೊಟ್ಟಿದ್ದರು. ಹೀಗಾಗಿ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಸಂಜಯ್‌ ಮಾಂಜ್ರೇಕರ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.

ಹೀಗಾಗಿ ಭಾನುವಾರ ಜಡೇಜಾ ಅವರ ಸಂದರ್ಶನ ಮಾಡುವ ಮೊದಲೇ "ನನ್ನೊಟ್ಟಿಗೆ ಮಾತನಾಡಲು ನಿಮಗೆ ಸಮಸ್ಯೆ ಏನೂ ಇಲ್ಲ ತಾನೆ?," ಎಂದು ಮಾಂಜ್ರೇಕರ್ ಕೇಳಿದರು. ಆಗ ನಗುತ್ತಲೇ ಉತ್ತರ ಕೊಟ್ಟ ಜಡೇಜಾ, ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸಂದರ್ಶನದಲ್ಲಿ ಮುಂದುವರಿದರು.

"ಕೊನೆವರೆಗೂ ಆಡಬೇಕೆಂದುಕೊಂಡಿದ್ದೆ. ಏಕೆಂದರೆ ಪಾಕ್‌ ತಂಡದ ಬೌಲಿಂಗ್ ಅತ್ಯುತ್ತಮವಾಗಿದೆ. ಅವರ ವೇಗಿಗಳು ಕೆಟ್ಟ ಎಸೆತಗಳನ್ನು ನೀಡಲೇ ಇಲ್ಲ. ಎಡಗೈ ಸ್ಪಿನ್ನರ್‌ ಎದುರು ಪಂದ್ಯ ಮುಗಿಸಲು ವಿಫಲವಾಗಿದ್ದಕ್ಕೆ ಬೇಸರವಿದೆ. ಆದರೆ, ಹಾರ್ದಿಕ್ ಅದ್ಭುತ ಆಟವಾಡಿದರು. ಕ್ರೀಸ್‌ಗೆ ಬಂದಾಗಲೇ ತಮ್ಮ ಹೊಡೆತಗಳನ್ನು ಆಡುವುದಾಗಿ ಅವರು ಹೇಳಿದ್ದರು. ಅವರು ಕೊನೆವರೆಗೂ ನಿಂತು ಆಡಿದ್ದಕ್ಕೆ ಬಹಳ ಖುಷಿಯಿದೆ" ಎಂದು ಸಂದರ್ಶನದ ವೇಳೆ ಜಡೇಜಾ ಹೇಳಿದರು.

Edited By : Vijay Kumar
PublicNext

PublicNext

29/08/2022 01:12 pm

Cinque Terre

51.09 K

Cinque Terre

0

ಸಂಬಂಧಿತ ಸುದ್ದಿ