ಪಾಕಿಸ್ತಾನದ ವಿರುದ್ಧ ಕೊನೆಯ ಓವರ್‌ನಲ್ಲಿ ಡಾಟ್ ಬಾಲ್ ಆಡಿದ ನಂತರ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊನೆಯ ನಾಲ್ಕು ಎಸೆತಗಳಲ್ಲಿ ಭಾರತಕ್ಕೆ ಗೆಲ್ಲಲು ಆರು ರನ್‌ಗಳ ಅಗತ್ಯವಿದ್ದಾಗ ಹಾರ್ದಿಕ್ ಡಾಟ್ ಬಾಲ್ ಆಡಿದರು. ನಂತರ ಅವರು ದಿನೇಶ್ ಕಾರ್ತಿಕ್ ಕಡೆಗೆ ನೋಡಿ, 'ನಾನು ಪಂದ್ಯವನ್ನು ಗೆದ್ದುಕೊಡುವೆ' ಎಂದು ಆತ್ಮವಿಶ್ವಾಸದಿಂದ ಸನ್ನೆ ಮಾಡಿದರು. ಮುಂದಿನ ಎಸೆತದಲ್ಲಿ ಹಾರ್ದಿಕ್ ಸಿಕ್ಸರ್ ಸಿಡಿಸಿದರು.
PublicNext
29/08/2022 11:40 am