ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Asia Cup: SL vs AFG; ಅಫ್ಘಾನ್ ಬೌಲಿಂಗ್ ದಾಳಿಗೆ ಲಂಕಾ ತತ್ತರ- ನಬಿ ಪಡೆಗೆ 106 ರನ್‌ಗಳ ಗುರಿ

ದುಬೈ: ಅಘಾನಿಸ್ಥಾನದ ಬೌಲರ್‌ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಆಲೌಟ್‌ಗೆ ತುತ್ತಾಗಿದೆ. ಇದರೊಂದಿಗೆ ಅಫ್ಘಾನ್ ತಂಡಕ್ಕೆ 106 ರನ್‌ಗಳ ಗುರಿ ನೀಡಿದೆ.

ಏಷ್ಯಾ ಕಪ್ 2022ರ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ಥಾನ ತಂಡದ ನಾಯಕ ಮೊಹಮ್ಮದ್ ನಬಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು 19.4 ಓವರ್‌ಗಳಲ್ಲಿ 105 ರನ್‌ ಗಳಿಸಿ ಸರ್ವಪತನ ಕಂಡಿತು. ತಂಡದ ಭಾನುಕಾ ರಾಜಪಕ್ಸೆ 38 ರನ್‌, ಚಾಮಿಕಾ ಕರುಣಾರತ್ನೆ 31 ರನ್‌ ಹಾಗೂ ದನುಷ್ಕ ಗುಣತಿಲಕ 17 ರನ್‌ ಗಳಿಸಿದರು. ಉಳಿದ ಬ್ಯಾಟರ್‌ಗಳು 10 ರನ್‌ಗಳ ಗಡಿ ದಾಟಲು ವಿಫಲರಾದರು.

ಇನ್ನು ಅಫ್ಘಾನ್ ತಂಡದ ಪರ ಫಜಲ್ಹಕ್ ಫಾರೂಕಿ 3 ವಿಕೆಟ್ ಉರುಳಿಸಿದರೆ, ನಾಯಕ ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ತಲಾ 2 ವಿಕೆಟ್ ಪಡೆದುಕೊಂಡರೆ, ನವೀನ್-ಉಲ್-ಹಕ್ 1 ವಿಕೆಟ್‌ ಕಿತ್ತು ಮಿಂಚಿದರು.

Edited By : Vijay Kumar
PublicNext

PublicNext

27/08/2022 09:26 pm

Cinque Terre

66.64 K

Cinque Terre

0

ಸಂಬಂಧಿತ ಸುದ್ದಿ