ಹರಾರೆ: ಯುವ ಬ್ಯಾಟರ್ ಗಳಾದ ಶುಭ್ಮನ್ ಗಿಲ್ ಶತಕ ಹಾಗೂ ಇಶಾನ್ ಕಿಶನ್ ಅರ್ಧಶತಕದ ಸಹಾಯದಿಂದ ಭಾರತ ತಂಡವು ಜಿಂಬಾಬ್ವೆಗೆ 290 ರನ್‌ಗಳ ಗುರಿ ನೀಡಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯುತ್ತಿರು ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ.ಎಲ್. ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂರೆ ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ತಂಡದ ಪರ ಶುಭ್ಮನ್ ಗಿಲ್ 130 ರನ್, ಇಶಾನ್ ಕಿಶನ್ 50 ರನ್, ಶಿಖರ್ ಧವನ್ 40 ರನ್ ಹಾಗೂ ನಾಯಕ ಕೆ.ಎಲ್. ರಾಹುಲ್ 30 ರನ್ ಗಳಿಸಿದರು.
PublicNext
22/08/2022 04:44 pm