ನವದೆಹಲಿ: ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದು, ಅವರಿಗೆ ಬಿಸಿಸಿಐ ಮಹತ್ವದ ಜವಾಬ್ದಾರಿಯೊಂದನ್ನು ನೀಡಿದೆ.
ಹೌದು. ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. 3 ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದ ಸೆಲೆಕ್ಷನ್ ಕಮಿಟಿ, ಶಿಖರ್ ಧವನ್ ಬದಲಿಗೆ ಈಗ ಕೆ.ಎಲ್.ರಾಹುಲ್ಗೆ ನಾಯಕತ್ವ ಪಟ್ಟ ಕಟ್ಟಿದೆ. ಹೀಗಾಗಿ ನಾಯಕನಾಗಿದ್ದ ಧವನ್, ಈಗ ಉಪನಾಯಕರಾಗಿ ಹಿಂಬಡ್ತಿ ಪಡೆದಿದ್ದಾರೆ. 3 ಪಂದ್ಯಗಳ ಸರಣಿ ಆಗಸ್ಟ್ 18ರಿಂದ ಆರಂಭವಾಗಲಿದೆ.
PublicNext
12/08/2022 05:15 pm