ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್ ನಲ್ಲಿ ಕಳೆದ ಜುಲೈ 28ರಂದು ಆರಂಭವಾಗಿದ್ದ ಪ್ರತಿಷ್ಠಿತ ಕಾಮನ್‍ವೆಲ್ತ್ ಗೇಮ್ಸ್ ಗೆ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು, ಕ್ರೀಡಾಕೂಟಕ್ಕೆ ನಿನ್ನೆ (ಆಗಷ್ಟ್ 8ರಂದು) ತೆರೆಬಿದ್ದಿದೆ.
ಈ ಬಾರಿಯ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತವು ಒಟ್ಟು 61 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದೆ.
ಇನ್ನು ಭಾರತದ 22 ಚಿನ್ನದ ಪದಕಗಳಲ್ಲಿ 6 ಕುಸ್ತಿಯಿಂದ, 4 ಟೇಬಲ್ ಟೆನಿಸ್, ಪ್ಯಾರಾ ಟೇಬಲ್ ಟೆನಿಸ್ನಿಂದ, ವೇಟ್ಲಿಫ್ಟಿಂಗ್ ನಿಂದ 3, ಬ್ಯಾಡ್ಮಿಂಟನ್ ನಿಂದ 3 ಮತ್ತು ಬಾಕ್ಸಿಂಗ್ ನಿಂದ 3 ಚಿನ್ನದ ಪದಕ ಬಂದಿವೆ. ಲಾನ್ ಬೌಲ್ಗಳು, ಪ್ಯಾರಾ ಪವರ್ಲಿಫ್ಟಿಂಗ್ ಮತ್ತು ಅಥ್ಲೆಟಿಕ್ಸ್ನಲ್ಲಿ ಭಾರತವು ತಲಾ ಒಂದು ಚಿನ್ನವನ್ನು ಗೆದ್ದುಕೊಂಡಿತು.
PublicNext
09/08/2022 07:08 am