ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಕಳೆದು ಕೊಂಡಾಗಿದೆ. ಇದರ ಬೆನ್ನಲ್ಲಿಯೇ ಫ್ಯಾನ್ಸ್ ಫಾಲೋಯಿಂಗ ಕೂಡ ಕಡಿಮೆ ಆಗುತ್ತಿದೆ. ವಿರಾಟ್ ಮೈದಾನಕ್ಕೆ ಬಂದು ಕ್ರೀಸ್ ಮೇಲೆ ನಿಂತರೇ ಸಾಕು. ಮೈದಾನದ ತುಂಬೆಲ್ಲ ಕೊಹ್ಲಿ ಅನ್ನೋ ಕೂಗು ಕೇಳುತ್ತಿತ್ತು. ಅದು ಈಗ ಇಲ್ಲವೇ ಇಲ್ ಬಿಡಿ.
ವಿರಾಟ್ ಕೊಹ್ಲಿ ಈಗ ಮತ್ತೆ ಫಾರ್ಮ್‌ಗೆ ಬರೋಕೆ ರೆಡಿ ಆಗುತ್ತಿದ್ದಾರೆ.ಕಳೆದು ಹೋಗ್ತಿರೋ ಫ್ಯಾನ್ ಗಳನ್ನ ಮರಳಿ ಪಡೆಯೋಕೆ ತಯಾರಿ ನಡೆಸಿದ್ದಾರೆ.
ಹೌದು. ಏಷಿಯಾ ಕಪ್ ನಲ್ಲಿ ಮತ್ತೆ ತಮ್ಮ ಹಳೆ ಖದರ್ ತೋರಿಸೋಕೆ ಸಿದ್ದತೆ ನಡೆಸಿದ್ದಾರೆ. ಈ ಒಂದು ಏಷಿಯಾ ಕಪ್ ಪಂದ್ಯದಲ್ಲಿ ರನ್ ಮಷಿನ್ ಕೊಹ್ಲಿಯ ಆಟವನ್ನ ನೋಡಬಹುದು ಅನ್ನೋಮಟ್ಟಿಗೆ ಕೊಹ್ಲಿ ಸಿದ್ದತೆ ನಡೆಸಿದ್ದಾರೆ. ತನ್ನ ಎಲ್ಲ ಒತ್ತಡಗಳನ್ನ ಬದಿಗಿಟ್ಟು ಈಗ ಕಾಮೆಂಟ್ ಹೊಡೆಯೋರಿಗೆ ತಕ್ಕ ಉತ್ತರ ಕೊಡೋಕೆ ಕೊಹ್ಲಿ ಸಜ್ಜಾಗಿದ್ದಾರೆ.
PublicNext
07/08/2022 02:45 pm