ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs WI: ಭಾರತದ ಯುವ ಬೌಲರ್‌ ದಾಳಿಗೆ ವಿಂಡೀಸ್ ತತ್ತರ- ಸರಣಿ ಭಾರತದ ವಶ

ಲಾಡರ್‌ಹಿಲ್‌: ಅವೇಶ್ ಖಾನ್, ಅರ್ಷದೀಪ್ ಸಿಂಗ್ ಸೇರಿದಂತೆ ಯುವ ಬೌಲರ್‌ಗಳ ಅದ್ಭುತ ಬೌಲಿಂಗ್‌ ಸಹಾಯದಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವು 59 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3-1 ಅಂತರದಿಂದ ಟೀಂ ಇಂಡಿಯಾ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

5 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್‌ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತವು ನಾಯಕ ರೋಹಿತ್ ಶರ್ಮಾ 33 ರನ್, ರಿಷಭ್ ಪಂತ್ 44 ರನ್ ಹಾಗೂ ಸಂಜು ಸ್ಯಾಮ್ಸನ್ ಅಜೇಯ 30 ರನ್‌ಗಳ ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 191 ರನ್‌ ಗಳಿಸಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು 19.1 ಓವರ್‌ಗಳಲ್ಲಿ 132 ರನ್‌ಗೆ ಆಲೌಟ್‌ಗೆ ಒಳಗಾಗಿ ಸೋಲು ಒಪ್ಪಿಕೊಂಡಿತು. ಇನ್ನು ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್‌ ಕಿತ್ತರೆ, ಅವೇಶ್ ಖಾನ್, ಅಕ್ಷರ್ ಪಟೇಲ್ ಹಾಗೂ ರವಿ ಬಿಷ್ಣೋಯ ತಲಾ 2 ವಿಕೆಟ್ ಕಿತ್ತು ತಂಡಕ್ಕೆ ಜಯ ತಂದುಕೊಟ್ಟರು.

Edited By : Vijay Kumar
PublicNext

PublicNext

07/08/2022 07:15 am

Cinque Terre

61.74 K

Cinque Terre

6

ಸಂಬಂಧಿತ ಸುದ್ದಿ