ಬರ್ಮಿಂಗ್‌ಹ್ಯಾಮ್: 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕುಸ್ತಿಪಟು ರವಿ ದಹಿಯಾ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ಶನಿವಾರ ನಡೆದ ಪುರುಷರ ಫ್ರೀಸ್ಟೈಲ್ 57 ಕೆಜಿ ಸ್ಪರ್ಧೆಯಲ್ಲಿ ನೈಜೀರಿಯಾ ಆಟಗಾರನನ್ನು ತಾಂತ್ರಿಕ ದಕ್ಷತೆಯ ಆಧಾರದ ಮೇಲೆ ಸೋಲಿಸಿ ಪದಕ ಗೆದ್ದರು. ಈ ಮೂಲಕ ಭಾರತದ ಒಟ್ಟು ಚಿನ್ನದ ಪದಕದ ಸಂಖ್ಯೆ 10ಕ್ಕೆ ಏರಿದೆ. ಕುಸ್ತಿಪಟು ರವಿ ದಹಿಯಾ ಅವರು ಟೋಕಿಯೊ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದರು.
PublicNext
06/08/2022 11:00 pm