ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CWG 2022: IND vs ENG; ಇಂಗ್ಲೆಂಡ್‌ ವಿರುದ್ಧ ಅಬ್ಬರಿಸಿ ಗೆದ್ದ ಟೀಂ ಇಂಡಿಯಾ- ಫೈನಲ್‌ಗೆ ಲಗ್ಗೆ

ಬರ್ಮಿಂಗ್​ಹ್ಯಾಮ್​​: ಕಾಮನ್​ವೆಲ್ತ್ ಕ್ರೀಡಾಕೂಟದ ಮೊದಲ ಮಹಿಳಾ ಟಿ20 ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತಂಡವು 4 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಫೈನಲ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿ ಹೊರ ಹೊಮ್ಮಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್​ಪ್ರೀತ್ ಕೌರ್ ಬಳಗ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ತಂಡವು 5 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡವು 6 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿ ಸೋಲಿಗೆ ತುತ್ತಾಯಿತು.

ಇದಕ್ಕೂ ಮುನ್ನ ಭಾರತದ ಪರ ತಂಡದ ಪರ ಸ್ಮೃತಿ ಮಂದಾನ 61 ರನ್‌ (32 ಎಸೆತ, 8 ಬೌಂಡರಿ, 3 ಸಿಕ್ಸರ್), ಜೆಮಿಮಾ ರಾಡ್ರಿಗಸ್ ಅಜೇಯ 44 ರನ್‌ (31 ಎಸೆತ, 7 ಬೌಂಡರಿ), ದೀಪ್ತಿ ಶರ್ಮಾ 22 ರನ್‌ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್‌ ಗಳಿಸಿದ್ದರು.

Edited By : Vijay Kumar
PublicNext

PublicNext

06/08/2022 06:58 pm

Cinque Terre

50.41 K

Cinque Terre

8

ಸಂಬಂಧಿತ ಸುದ್ದಿ