2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಕೇವಲ ಒಂದು ಗಂಟೆ ಅಂತರದಲ್ಲೇ ಕುಸ್ತಿ ವೀರರು ಹ್ಯಾಟ್ರಿಕ್ ಚಿನ್ನ ಗೆದ್ದಿದ್ದಾರೆ. ಬಜರಂಗ್, ದೀಪಕ್ ಮತ್ತು ಸಾಕ್ಷಿ ಬಂಗಾರ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರೋ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕಗಳ ಬೇಟೆ ಮುಂದುವರೆದಿದೆ. ಕಳೆದ ರಾತ್ರಿ (ಶುಕ್ರವಾರ) ನಡೆದ ಕುಸ್ತಿಯಲ್ಲಿ ಭಾರತದ ಬರೋಬ್ಬರಿ ಮೂವರು ಆಟಗಾರರು ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.
1) ಬಜರಂಗ್ ಪೂನಿಯಾ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾಗೆ ಚಿನ್ನ ಗೆದ್ದಿದ್ದಾರೆ. ಕೆನಡಾದ ಲಂಚ್ಲನ್ ವಿರುದ್ಧ ಬಜರಂಗ್ ಪೂನಿಯಾ ಗೆದ್ದು ಬೀಗಿದ್ದಾರೆ.
2) ಮಹಿಳೆಯರ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಚಿನ್ನದ ಬೇಟೆಯಾಡಿದ್ದಾರೆ. ಮಹಿಳೆಯರ 62 ಕೆ.ಜಿ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲ್ಲಿಕ್ ಬಂಗಾರ ಗೆದ್ದು ಬೀಗಿದ್ದಾರೆ. ಕೆನಡಾದ ಅನಾ ಗೊಡಿನೆಜ್ ವಿರುದ್ಧ ಸಾಕ್ಷಿ ಮಲಿಕ್ ಗೆಲುವಾಗಿದೆ.
3) ದೀಪಕ್ ಪೂನಿಯಾ ಬಂಗಾರ ಗೆದ್ದಿದ್ದಾರೆ. ಕುಸ್ತಿಯ 86 ಕೆ.ಜಿ ವಿಭಾಗದಲ್ಲಿ ದೀಪಕ್ ಪೂನಿಯಾಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ಇನಾಮ್ ವಿರುದ್ಧ ದೀಪಕ್ ಗೆ ಗೆಲುವಾಗಿದೆ.
PublicNext
06/08/2022 07:31 am