ಬೆಸೆಟೆರ್: ಇಂಡಿಯಾ ವರ್ಸಸ್ ವೆಸ್ಟ್‌ಇಂಡೀಸ್ ಟಿ20 ಮೂರನೇ ಪಂದ್ಯದಲ್ಲಿ ಭಾರತ 7 ವಿಕೆಟ್ ಅಂತರದಿಂದಲೇ ಭರ್ಜಿರಿ ಗೆಲುವು ಸಾಧಿಸಿದೆ. ಆದರೆ, ಇದೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಹೊಡೆದ ಒಂದು ಫೋರ್ ನ ಆ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ರೋಹಿತ್ ಶರ್ಮಾ ಬೆನ್ನು ನೋವಿನ ಸೆಳೆತದಿಂದ ಬೇಗ ಔಟ್ ಆದರು. ಆದರೆ,ಸೂರ್ಯಕುಮಾರ್ ಯಾದವ್ ಅಂತೂ ಅತ್ಯುತ್ತಮವಾಗಿಯೇ ಬ್ಯಾಟಿಂಗ್ ಮಾಡಿದರು.
44 ಎಸೆತದಲ್ಲಿ 8 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಹೊಡೆದ ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧ ಶತಕ ಹೊಡೆದರು. ಇದೇ ವೇಳೆನೆ ಸೂರ್ಯಕುಮಾರ್ ಯಾದವ್ ಬಾರಿಸಿದ ಆಕರ್ಷಕ ಬೌಂಡರಿಯೊಂದರ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರ್ಧಶತಕ ಹೊಡೆದ ಬಳಿಕ ಸೂರ್ಯಕುಮಾರ್ ಯಾದವ್, ವೆಸ್ಟ್‌ಇಂಡೀಸ್ ವೇಗಿ ಅಲ್ಜೆರಿ ಜೋಸೆಫ್ ಎಸೆದ ಬೌನ್ಸರ್ ಅನ್ನ ಸೂರ್ಯಕುಮಾರ್ ಸೊಗಸಾಗಿ ವಿಕೆಟ್ ಕೀಪರ್ ಮೇಲಿಂದಲೇ ಚಂಡನ್ನ ಬೌಂಡರಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು. ಅದೇ ವೀಡಿಯೋನೇ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
03/08/2022 07:27 pm