ನವದೆಹಲಿ: ಬಹು ನಿರೀಕ್ಷಿತ 2022ರ ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಾರಿಯ ಏಷ್ಯಾ ಕಪ್ 2022 ಶ್ರೀಲಂಕಾದ ಬದಲಿಗೆ ಯುಎಇಯಲ್ಲಿ ನಡೆಯಲಿದೆ. ಇದು ಆಗಸ್ಟ್ 27ರಂದು ಟೂರ್ನಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಿಂದ ಪ್ರಾರಂಭವಾಗಲಿದ್ದು, ಪ್ರಶಸ್ತಿ ಪಂದ್ಯವು ಸೆಪ್ಟೆಂಬರ್ 11ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನದ ವಿರುದ್ಧ ಆಡಲಿದೆ.
ಮೊದಲು ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಈ ಸಮಯದಲ್ಲಿ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಡೀ ದೇಶದಲ್ಲಿ ಪ್ರಕ್ಷುಬ್ಧತೆ ಇದೆ. ದೇಶವು ಆಹಾರ ಮತ್ತು ನೀರಿನ ಕೊರತೆಯಿಂದ ಹೋರಾಡುತ್ತಿದೆ. ಅಷ್ಟೇ ಅಲ್ಲ, ಪೆಟ್ರೋಲ್ ಮತ್ತು ಡೀಸೆಲ್‌ನಲ್ಲೂ ಗಣನೀಯ ಕೊರತೆ ಉಂಟಾಗಿದೆ. ಜನರು ಪ್ರತಿದಿನ ಬಂಕ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಈ ಹಿಂದೆ ಶ್ರೀಲಂಕಾ ಆಸ್ಟ್ರೇಲಿಯಾ ಪಂದ್ಯದ ವೇಳೆಯೂ ಪ್ರತಿಭಟನಾಕಾರರು ಕ್ರೀಡಾಂಗಣ ಪ್ರವೇಶಿಸಿದ್ದರು. ಹೀಗಾಗಿ ಮುನ್ನೇಚ್ಚರಿಕ ಕ್ರಮವಾಗಿ ಏಷ್ಯಾ ಕಪ್ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.
PublicNext
02/08/2022 05:17 pm