ಬಾಸೆಟೆರೆ: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಕಡೆ ಕ್ಷಣದ ಬದಲಾವಣೆ ಎನ್ನುವಂತೆ ಪಂದ್ಯದ ಆರಂಭದ ಸಮಯ ಬದಲಾಗಿದೆ.
ಇಂದು ಸಂಜೆ 8 ಗಂಟೆಯಿಂದ ಆರಂಭವಾಗಬೇಕಿದ್ದ ಪಂದ್ಯವು ಎರಡು ಗಂಟೆ ತಡವಾಗಿ ಅಂದರೆ ರಾತ್ರಿ 10 ಗಂಟೆಗೆ ಆರಂಭವಾಗಲಿದೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದ್ದು, ಖ್ಯಾತ ಕ್ರಿಕೆಟ್ ಪತ್ರಕರ್ತ ಜೋನ್ಸ್ ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಲಗೇಜ್ ತಡವಾಗಿ ಆಗಮಿಸುತ್ತಿರುವುದರಿಂದಾಗಿ ಪಂದ್ಯ ಎರಡು ಗಂಟೆ ತಡವಾಗಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎರಡನೇ ಟಿ20 ಪಂದ್ಯವು ರಾತ್ರಿ 10 ಗಂಟೆಯಿಂದ ಆರಂಭವಾಗಲಿದೆ.
PublicNext
01/08/2022 07:20 pm