ವೇಟ್‌ಲಿಫ್ಟರ್ ಪಿ ಗುರುರಾಜ ಅವರು ಕಾಮನ್‌ವೆಲ್ತ್ ಗೇಮ್ಸ್ (CWG) 2022ರ ಪುರುಷರ 61 ಕೆಜಿ ವಿಭಾಗದಲ್ಲಿ ಶನಿವಾರ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದು ಭಾರತದ ಪದಕಗಳ ಸಂಖ್ಯೆಯನ್ನು ಎರಡಕ್ಕೆ ಏರಿಸಿದೆ.
ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ CWG 2018ರಲ್ಲಿ ಗುರುರಾಜ ಬೆಳ್ಳಿ ಪದಕ ಪಡೆದಿದ್ದರು. ಇಂದು ಬೆಳಿಗ್ಗೆ ವೇಟ್‌ಲಿಫ್ಟರ್ ಸಂಕೇತ್ ಸರ್ಗರ್ CWG 2022ರಲ್ಲಿ ಪುರುಷರ 55 ಕೆಜಿ ವಿಭಾಗದಲ್ಲಿ ಬೆಳ್ಳಿಯೊಂದಿಗೆ ಭಾರತದ ಪದಕ ಪಟ್ಟಿಯನ್ನು ತೆರೆದರು.
PublicNext
30/07/2022 06:47 pm