ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಭಾರತ ತಂಡವು ಡಕ್ವರ್ತ್ ಲುಯಿಸ್ ನಿಯಮದ ಅನ್ವಯ ಬರೋಬ್ಬರಿ 119 ರನ್ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಭಾರತವು 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತವು ಮೊದಲು ಬ್ಯಾಟಿಂಗ್ ಮಾಡಿ 35 ಓವರ್‌ಗಳಲ್ಲಿ 3 ವಿಕೆಟ್ 225 ರನ್ ಗಳಿಸಿತು. ತಂಡದ ಪರ ಶುಭ್ಮನ್ ಗಿಲ್ ಅಜೇಯ 98 ರನ್, ನಾಯಕ ಶಿಖರ್ ಧವನ್ 58 ರನ್ ಹಾಗೂ ಶ್ರೇಯಷ್ ಅಯ್ಯರ್ 44 ರನ್ ಗಳಿಸಿದರು.
ಬಳಿಕ ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡವು 26 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಗಳಿಸಿ ಸೋಲಿಗೆ ತುತ್ತಾಯಿತು. ಇನ್ನು ಭಾರತದ ಪರ ಯಜುವೇಂದ್ರ ಚಹಾಲ್ 4 ವಿಕೆಟ್ ಕಿತ್ತು ಮಿಂಚಿದರೆ, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಿತ್ತರು. ಇನ್ನು ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಉರುಳಿಸಿದರು.
ಭಾರತದ ದಾಖಲೆ;
ಟೀಂ ಇಂಡಿಯಾ ತಂಡವು ಮೊದಲ ಬಾರಿಗೆ ವಿಂಡೀಸ್ ತಂಡವನ್ನು ಅವರ ನೆಲದಲ್ಲೇ ಕ್ಲೀನ್ ಸ್ವೀಪ್ ಮಾಡಿದ ದಾಖಲೆ ಮಾಡಿದೆ. ಆದರೆ ಭಾರತವು ಇದುವರೆಗೂ ಒಮ್ಮೆಯೂ ಕೆರಿಬಿಯನ್ ದೈತ್ಯರನ್ನು ಕ್ಲೀನ್ಸ್ವೀಪ್ ಮಾಡಲು ಸಾಧ್ಯವಾಗಿರಲಿಲ್ಲ. ಶಿಖರ್ ಧವನ್ ನೇತೃತ್ವದ ತಂಡವು ಈ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
PublicNext
28/07/2022 10:20 am