ನವದೆಹಲಿ: ಪ್ಯಾಡಿ ಅಪ್ಟನ್ ಅವರನ್ನು ಮತ್ತೆ ಟೀಂ ಇಂಡಿಯಾದ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
ಹೌದು. ಎಂ.ಎಸ್ ಧೋನಿ ನಾಯಕತ್ವದಲ್ಲಿ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಪ್ಯಾಡಿ ಅಪ್ಟನ್ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅದೇ ಜವಾಬ್ದಾರಿಯೊಂದಿಗೆ ರೋಹಿತ್ ಶರ್ಮಾ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಸದ್ಯ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡವನ್ನು ಸೇರಿದ್ದಾರೆ.
ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮುಂದಿನ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿರುವ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಿಮಿತ್ತ ಪ್ಯಾಡಿ ಅಪ್ಟನ್ ಅವರನ್ನು ಭಾರತ ತಂಡಕ್ಕೆ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿ ಮರು ನೇಮಕ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಮುಂದಿನ ಮಹತ್ವದ ಟೂರ್ನಿಗೆ ರೋಹಿತ್ ಬಳಗಕ್ಕೆ ಇನ್ನಷ್ಟು ಶಕ್ತಿ ಬಂದತ್ತಾಗಿದೆ.
PublicNext
27/07/2022 07:23 pm