ಮುಂಬೈ: ಭಾರತದಲ್ಲಿ ನಡೆಯಲಿರುವ ದೇಸಿ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮಾಸ್ಟರ್ ಕಾರ್ಡ್ ಟೀಂ ಇಂಡಿಯಾದ ಶೀರ್ಷಿಕೆ ಪ್ರಾಯೋಜಕ ಕಂಪನಿಯಾಗಿ ಕಾಣಿಸಿಕೊಳ್ಳಲಿದೆ. ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್ ಕಾರ್ಡ್‌ಗೆ ವರ್ಗಾಯಿಸಿದ್ದು, ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಯಾಗಲಿದೆ.
7 ವರ್ಷಗಳಿಂದ ಶೀರ್ಷಿಕೆ ಪ್ರಾಯೋಜಕರಾಗಿದ್ದ ಪೇಟಿಎಂ ಆರ್ಥಿಕ ಸಂಕಷ್ಟದಿಂದಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. 2023ರ ವರೆಗೆ ಮಾಸ್ಟರ್ ಕಾರ್ಡ್ ಶೀರ್ಷಿಕೆ ಪ್ರಾಯೋಜಕತ್ವ ಮಾಡಲಿದೆ ಎಂದು ಮೂಲಗಳು ವರದಿಯಾಗಿದೆ.
ಪ್ರಯೋಜಕತ್ವದ ಹಕ್ಕನ್ನು ಮುಂದಿನ 10 ದಿನಗಳಲ್ಲಿ ಪೇಟಿಎಂ, ಮಾಸ್ಟರ್ ಕಾರ್ಡ್ಸ್‌ಗೆ ವರ್ಗಾಹಿಸುವ ಸಾಧ್ಯತೆ ಇದೆ. 2019ರ ಆಗಸ್ಟ್‌ನಲ್ಲಿ ಬಿಸಿಸಿಐ ಜೊತೆಗೆ ಪೇಟಿಎಂ ಶೀರ್ಷಿಕೆ ಪ್ರಯೋಜಕತ್ವದ ಹಕ್ಕನ್ನು ಮುಂದಿನ 4 ವರ್ಷಕ್ಕೆ ನವೀಕರಣಗೊಳಿಸಿತ್ತು. ಮುಂದಿನ ನಾಲ್ಕು ವರ್ಷದ ಪ್ರಯೋಜಕತ್ವದ ಹಕ್ಕನ್ನು 3.80 ಕೋಟಿ ರೂ.ಗೆ ಪೇಟಿಎಂ ತನ್ನದಾಗಿಸಿಕೊಂಡಿತ್ತು. ಪೇಟಿಎಂ 2015ರಿಂದ 2019ರ ವರಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ಬಿಸಿಸಿಐನಿಂದ 2.4 ಕೋಟಿ ರೂ. ನೀಡಿ ಖರೀದಿತ್ತು. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಿಂದ ಭಾರತ ತಂಡ ಹೊಸ ಪ್ರಯೋಜಕತ್ವದೊಂದಿಗೆ ಆಡುವ ಸಾಧ್ಯತೆ ಇದೆ.
PublicNext
27/07/2022 03:02 pm