ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ 3 ರನ್ ಗಳ ರೋಚಕ ಜಯ..

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಪಡೆ, 3 ರನ್ ಗಳ ರೋಚಕ ಗೆಲುವು ದಾಖಲಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0ರಲ್ಲಿ ಮುನ್ನಡೆ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ, ಶಿಖರ್ ಧವನ್ – ಶುಭ್ ಮನ್ ಗಿಲ್, ವಿಂಡೀಸ್ ಬೌಲರ್ ಗಳ ಮೇಲೆ ದಂಡಯಾತ್ರೆ ನಡೆಸಿ ಮೊದಲ ವಿಕೆಟ್ಗೆ 119 ರನ್ ಕಲೆ ಹಾಕಿ ಗಮನ ಸೆಳೆದ್ರು.

ಶತಕದ ಗಡಿಯಲ್ಲಿದ್ದ ಧವನ್, ಔಟಾಗಿ 3 ರನ್ ಗಳಿಂದ ತಮ್ಮ 18ನೇ ಶತಕವನ್ನ ಮಿಸ್ ಮಾಡಿಕೊಂಡ್ರು. ಅಂತಿಮವಾಗಿ ಭಾರತ, 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳ ಕಠಿಣ ಮೊತ್ತವನ್ನ ಕಲೆಹಾಕ್ತು. ವಿಂಡೀಸ್ ಪರ ಜೋಸೆಫ್, ಮೋಟಿ ತಲಾ 2 ವಿಕೆಟ್, ಶೆಫರ್ಡ್, ಹೊಸೈನ್ ತಲಾ 1 ವಿಕೆಟ್ ಪಡೆದು ಮಿಂಚಿದ್ರು.ಇನ್ನು ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, ಆರಂಭಿಕ ಆಘಾತ ಅನುಭವಿಸ್ತು.

ಕೊನೇ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 15 ರನ್ ಬೇಕಿತ್ತು. ಮೊದಲ ಐದು ಎಸೆತಗಳಲ್ಲಿ 10 ರನ್ ಗಳಿಸಿದ ವಿಂಡೀಸ್ ಬ್ಯಾಟರ್ಸ್, ಅಂತಿಮ ಎಸೆತಕ್ಕೆ 5 ರನ್ ಗಳಿಸಬೇಕಿತ್ತು. ಆದ್ರೆ ಸಿರಾಜ್, 5 ರನ್ ಅನ್ನು ಡಿಪೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ್ರು.ಪರಿಣಾಮ ಭಾರತ 3 ರನ್ ಗಳ ರೋಚಕ ಗೆಲುವು ದಾಖಲಿಸಿತು. ಅಲ್ಲದೆ, 1-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

Edited By : Nirmala Aralikatti
PublicNext

PublicNext

23/07/2022 07:23 am

Cinque Terre

94.77 K

Cinque Terre

1

ಸಂಬಂಧಿತ ಸುದ್ದಿ