ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಹಾಲ್ ಬೆನ್ನಿಗೆ ನಿಂತು ಬಿಸಿಸಿಐಗೆ ಕ್ಲಾಸ್‌ ತೆಗೆದುಕೊಂಡ ಆಕಾಶ್​ ಚೋಪ್ರಾ

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಯಜುವೇಂದ್ರ ಚಹಾಲ್ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿ ಮುಂಚಿದರು. ಆದರೆ ಅವರಿಗೆ ಸಹರಿಯಾದ ಅವಕಾಶಗಳನ್ನು ನೀಡುತ್ತಿಲ್ಲವೆಂದು ಬಿಸಿಸಿಐ ವಿರುದ್ಧ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ಅಸಮಾಧಾನ ಹೊರ ಹಾಕಿದ್ದಾರೆ.

ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ಯಜುವೇಂದ್ರ ಚಹಾಲ್​ ನೀಡಿದ ಪ್ರದರ್ಶನವನ್ನ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ಕೊಂಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಟೀಂ​ ಮ್ಯಾನೇಜ್​ಮೆಂಟ್​​ನ ನಡೆಯನ್ನ ಪ್ರಶ್ನಿಸಿದ್ದಾರೆ.

"ಚಹಲ್​ ಪ್ರದರ್ಶನದ ಬಗ್ಗೆ ಮಾತನಾಡಿರುವ ಆಕಾಶ್​​ ಚೋಪ್ರಾ, ಯುಜುವೇಂದ್ರ ಚಹಲ್​ ನೀಡಿದ ಪ್ರದರ್ಶನವೇ ಒಂದು ಪ್ರಶ್ನೆಯನ್ನ ಹುಟ್ಟಿಸುತ್ತೆ. ಸರಣಿಯಲ್ಲಿ ಚಹಲ್​ ಮಾಡಿದ ಬೌಲಿಂಗ್​​ ನೋಡಿದ ಮೇಲೆ ಯಾಕೆ ಈತನಿಗೆ ಯಾವಾಗಲೂ ಅವಕಾಶಗಳು ಸಿಗಲ್ಲ ಅನ್ನೋದು ನನ್ನನ್ನ ಕಾಡುತ್ತಿದೆ" ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್‌ ಬ್ರಾಡ್‌ ಹಾಗ್ ಅವರು ಚಹಾಲ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು. ಜೊತೆಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಮಧ್ಯಮ ಓವರ್‌ಗಳಿಗೆ ಚಹಾಲ್ ಅತ್ಯುತ್ತಮ ಆಯ್ಕೆ ಎಂದಿದ್ದರು.

Edited By : Vijay Kumar
PublicNext

PublicNext

20/07/2022 10:09 am

Cinque Terre

45.96 K

Cinque Terre

0

ಸಂಬಂಧಿತ ಸುದ್ದಿ