ಆಂಟಿಗುವಾ: ವೆಸ್ಟ್ ಇಂಡೀಸ್ ಬ್ಯಾಟರ್ ಲೆಂಡ್ಲ್ ಸಿಮನ್ಸ್ ಅವರು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. 16 ವರ್ಷದ ಸುದೀರ್ಘ ವೃತ್ತಿಜೀವನಕ್ಕೆ ಅಂತಿಮವಾಗಿ ತೆರೆ ಎಳೆದಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ನಡುವೆ ಜುಲೈ 22ರಿಂದ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ನಿನ್ನೆಯಷ್ಟೇ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ದಿನೇಶ್ ರಾಮ್ದಿನ್ ವಿದಾಯ ಘೋಷಣೆ ಬೆನ್ನಲ್ಲೇ ಮತ್ತೋರ್ವ ಕ್ರಿಕೆಟಿಗ ಲೆಂಡ್ಲಿ ಸಿಮನ್ಸ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.
ಸ್ಟಾರ್ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದ ಸಿಮನ್ಸ್ ವೆಸ್ಟ್ ಇಂಡೀಸ್ ಪರ 8 ಟೆಸ್ಟ್, 68 ಏಕದಿನ ಹಾಗೂ 68 ಟಿ-20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಎರಡು ಶತಕ ಹಾಗೂ 16 ಅರ್ಧಶತಕ ಸಿಡಿಸಿದ್ದು, ಎಲ್ಲ ಮಾದರಿ ಕ್ರಿಕೆಟ್ನಿಂದ 3,763 ರನ್ಗಳಿಕೆ ಮಾಡಿದ್ದಾರೆ.
PublicNext
19/07/2022 03:52 pm