ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಫುಟ್ಬಾಲ್ ಲೀಗ್ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ

ಗದಗ: ಕೆ.ಎಚ್ ಪಾಟೀಲ್ ಫುಟ್ಬಾಲ್ ಲೀಗ್ ನ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಸಮಾರಂಭ ಗದಗ ನಗರದ ಕನಕ ಭವನದ ಸಮೀಪದಲ್ಲಿರುವ ಫುಟ್ಬಾಲ್ ಮೈದಾನದಲ್ಲಿ ನಡೆಸಲಾಯಿತು.

ಗದಗ ಜಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ರಾಜಶೇಖರ ಮ್ಯಾಗೇರಿ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಫುಟ್ಬಾಲ್ ತಂಡದ ನಾಯಕರಿಗೆ ಜರ್ಸಿ ಸಹ ವಿತರಣೆ ಮಾಡಿದ್ರು. ಟ್ರೋಫಿ ಜರ್ಸಿ ಬಿಡುಗಡೆ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಒಟ್ಟಿನಲ್ಲಿ ಕೆ ಎಚ್ ಪಾಟೀಲ್ ಫುಟ್ಬಾಲ್ ಲೀಗ್ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

Edited By :
PublicNext

PublicNext

19/07/2022 12:22 pm

Cinque Terre

28.49 K

Cinque Terre

0

ಸಂಬಂಧಿತ ಸುದ್ದಿ