ಮ್ಯಾಂಚೆಸ್ಟರ್: ಜೋಸ್ ಬಟ್ಲರ್ ಅರ್ಧಶತಕದ ಸಹಾಯದಿಂದ ಇಂಗ್ಲೆಂಡ್ ತಂಡವು ಭಾರತಕ್ಕೆ 260 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 45.5 ಓವರ್‌ಗಳಲ್ಲಿ 259 ಗಳಿಸಿ ಆಲ್‌ಔಟ್‌ಗೆ ತುತ್ತಾಯಿತು. ಇಂಗ್ಲೆಂಡ್ ಪರ ಜೋಸ್ ಬಟ್ಲರ್ 60 ರನ್, ಜೇಸನ್ ರಾಯ್ 41, ಮೊಯಿನ್ ಅಲಿ 34 ಹಾಗೂ ಕ್ರೇಗ್ ಓವರ್ಟನ್ 32 ರನ್ ಗಳಿಸಿದರು.
ಇನ್ನು ಭಾರತದ ಪರ ಹಾರ್ದಿಕ್ ಪಾಂಡ್ಯ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದರು. ಅವರು 7 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 3 ಮೆಡನ್ ಓವರ್ ಜೊತೆಗೆ 4 ವಿಕೆಟ್ ಉರುಳಿಸಿ ಮಿಂಚಿದರು. ಉಳಿದಂತೆ ಯಜುವೇಂದ್ರ ಚಹಾಲ್ 3 ವಿಕೆಟ್, ಮೊಹಮ್ಮದ್ ಸಿರಾಜ್ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡರು.
PublicNext
17/07/2022 07:42 pm