ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs ENG 2nd T20: ಮತ್ತೆ ಕೊಹ್ಲಿ ಫ್ಲಾಪ್- ಇಂಗ್ಲೆಂಡ್‌ಗೆ 171 ರನ್‌ಗಳ ಗುರಿ

ಬರ್ಮಿಂಗ್‌ಹ್ಯಾಮ್‌: ರವೀಂದ್ರ ಜಡೇಜಾ ಹಾಗೂ ನಾಯಕ ರೋಹಿತ್ ಶರ್ಮಾ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡವು ಇಂಗ್ಲೆಂಡ್ ತಂಡಕ್ಕೆ 171 ರನ್‌ಗಳ ಗುರಿ ನೀಡಿದೆ.

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ರವೀಂದ್ರ ಜಡೇಜಾ 46 ರನ್ ಹಾಗೂ ರೋಹಿತ್ ಶರ್ಮಾ 31 ರನ್‌ಗಳ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ. ತಂಡದ ಪರ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೆ ಗುರಿಯಾದರು.

Edited By : Vijay Kumar
PublicNext

PublicNext

09/07/2022 08:52 pm

Cinque Terre

65.86 K

Cinque Terre

4

ಸಂಬಂಧಿತ ಸುದ್ದಿ