ಕೂಲ್ ಕ್ಯಾಪ್ಟನ್ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಲೋಕದ ಲೆಜೆಂಡ್. ಜೆಂಟಲ್ಮ್ ನ್ ಗೇಮ್ ನಲ್ಲಿ ಧೋನಿ ಕ್ಯಾಪ್ಟನ್ ಆಗಿ, ಬ್ಯಾಟ್ಸ್ ಮನ್ ಆಗಿ, ವಿಕೆಟ್ ಕೀಪರ್ ಆಗಿ ಮಾಡಿದ ಸಾಧನೆ, ಒಂದೆರೆಡಲ್ಲ. ಧೋನಿ ಆಟ, ಸರಳತೆಯನ್ನ ಕೊಂಡಾಡದವರಿಲ್ಲ.
ಧೋನಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಪಂದ್ಯದ ಯಾವುದೇ ಸಂದರ್ಭದಲ್ಲೂ ಅಂಜದೇ, ಅಳುಕದೇ, ಸಿಂಗಲ್ ಹ್ಯಾಂಡೆಡ್ ಆಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಫಿನಿಶರ್ ಸಾಧನೆ ಅಮೋಘ.
ಇಂತಹ ಅಸಾಮಾನ್ಯ ಕ್ರಿಕೆಟರ್ ಗೆ, ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ಇನ್ನು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ನೆಚ್ಚಿನ ನಾಯಕನಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ನಮ್ಮ ಕಡೆಯಿಂದಲೂ ಜನ್ಮ ದಿನದ ಶುಭಾಶಯಗಳು ಧೋನಿ.
PublicNext
07/07/2022 01:07 pm