ಲಾಹೋರ್: ಮಾಜಿ ಕ್ರಿಕೆಟ್ ಹಾಗೂ ಪಾಕಿಸ್ತಾನ್ ಕ್ರಿಕಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಅವರಿಗೆ ಜೀವ ಭಯ ಇದೆ. ಅದಕ್ಕೇನೆ ಬುಲೆಟ್ ಪ್ರೂಫ್ ವಾಹನದಲ್ಲಿಯೇ ಓಡಾಡುತ್ತಿರೋದಾಗಿ ರಮೀಜ್ ರಾಜಾ ಸರ್ಕಾರದ ಸಮಿತಿಗೆ ಹೇಳಿಕೊಂಡಿದ್ದಾರೆ.
ಸರ್ಕಾರದ ಸೌಲಭ್ಯಗಳನ್ನ ರಮೀಜಾ ರಾಜಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಅದಕ್ಕೆ ಈ ಆರೋಪಕ್ಕೆ ಉತ್ತರಿಸಲೆಂದೇ ರಮೀಜ್ ರಾಜಾ ಸಮಿತಿಯ ವಿಚಾರಣೆಗೆ ಬಂದಿದ್ದರು. ಆಗಲೇ ತಮಗೆ ಜೀವ ಬೆದರಿಕೆ ಇದೆ. ಹಾಗಾಗಿಯೇ ಬುಲೆಟ್ ಪ್ರೂಫ್ ವಾಹನದಲ್ಲಿ ಓಡಾಡ್ತಿದ್ದೇನೆ ಅಂತಲೇ ರಮೀಜ್ ರಾಜಾ ತಿಳಿಸಿದ್ದಾರೆ.
ಸರ್ವಿಸ್ ರೂಲ್ಸ್ ಪ್ರಕಾರ ದಿನಭತ್ಯ ಹಾಗೂ ಪ್ರಯಾಣ ಭತ್ಯೆಯನ್ನು ಮಾತ್ರ ಬಳಸುತ್ತಿರೋದಾಗಿ, ರಮೀಜ್ ರಾಜಾ ಸುದೀರ್ಘವಾಗಿ ಎರಡು ಗಂಟೆ ನಡೆದ ವಿಚಾರಣೆಯಲ್ಲಿ ಹೇಳಿದ್ದಾರೆ.
PublicNext
05/07/2022 04:41 pm