ಭಾರತ ಮತ್ತು ಇಂಗ್ಲೆಂಡ್ ನಡುವನ ಟೆಸ್ಟ್ ಪಂದ್ಯದಲ್ಲಿ ಯಾರ್ಕರ್ ಕಿಂಗ್ ಜಸ್‌ಪ್ರಿತ್ ಬುಮ್ರಾ ಒಂದೇ ಓವರ್ ನಲ್ಲಿ 35 ರನ್ ಗಳಿಸಿ ವೆಸ್ಟ್ ಇಂಡೀಸ್ ನ ಶ್ರೇಷ್ಠ ಬ್ಯಾಟ್ಸ್ ಮನ್ ಬ್ರಿಯಾನ್ ಲಾರಾ ದಾಖಲೆ ಮುರಿದಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ಎರಡನೇ ದಿನದ ಪಂದ್ಯದಲ್ಲಿ, ಜಸ್ಪ್ರೀತ್ ಬೂಮ್ರಾ ಸಖತ್ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಅನುಭವಿ ಬೌಲರ್ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ ಬರೋಬ್ಬರಿ 35 ರನ್ ಗಳಿಸಿ ವಿಶ್ವ ದಾಖಲೆ ಮಾಡಿದ್ದಾರೆ ಮಿಸ್ಟರ್ ಬುಮ್ರಾ.
ಆದರೆ, ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ, 2004 ರಲ್ಲಿ ಅಂದ್ರೆ 18 ವರ್ಷದ ಹಿಂದೆ ಒಂದೇ ಓವರ್ ನಲ್ಲಿ 28 ರನ್ ಹೊಡೆದು ದಾಖಲೆ ಮಾಡಿದ್ದರು. ಆದರೆ, ಈಗ ಬುಮ್ರಾ ಆ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
PublicNext
02/07/2022 10:59 pm