ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈಗ ಬೇರೆ ವಿಷಯಕ್ಕೆ ಎಲ್ಲರ ಹೃದಯ ಗೆದ್ದಿದ್ದಾರೆ. ವಿಶೇಷ ಅಂದ್ರೆ ಆ ಒಂದು ಕೆಲಸದ ವೀಡಿಯೋ ಕೂಡ ಈಗ ವೈರಲ್ ಆಗಿದೆ.
ಸ್ಟಾಕ್ ಹೋಮ್ ಡೈಮಂಡ್ ಲೀಗ್ ನಲ್ಲಿ ನೀರಜ್ ಚೋಪ್ರಾ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. ಇದೇ ಖುಷಿಯಲ್ಲಿಯೇ ಇದ್ದ ನೀರಜ್‌ಗೆ ಅಭಿಮಾನಿಗಳು ಮನದುಂಬಿ ಶುಭ ಕೋರಿದ್ದಾರೆ.
ಇದೇ ಸಮಯದಲ್ಲಿಯೇ ಹಿರಿಯ ಅಭಿಮಾನಿ ಕೂಡ ಶುಭ ಕೋರಿದ್ದಾರೆ. ಆಗಲೇ ನೀರಜ್ ಚೋಪ್ರಾ, ಆ ಹಿರಿಯ ಅಭಿಮಾನಿಯ ಪಾದಗಳನ್ನ ಮುಟ್ಟಿ ನಮಸ್ಕರಿಸಿದರು. ಆಗಲೇ ಅಲ್ಲಿದ್ದ ಕೆಲವು ಅಭಿಮಾನಿಗಳು ನೀರಜ್ ನೋಡಿ ಸೋ ಡೌನ್ ಟು ಅರ್ಥ್ ಅಂತಲೇ ಉದ್ಘರಿಸಿದರು.
PublicNext
01/07/2022 08:12 pm