ಟೋಕಿಯೋ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ನಲ್ಲಿ 89.94 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದು, ಬೆಳ್ಳಿ ಪದಕವನ್ನು ಬಾಚಿದ್ದಾರೆ. 24 ಹರೆಯದ ನೀರಜ್ ಚೋಪ್ರಾ ಅದ್ಭುತ ಎಸೆತದೊಂದಿಗೆ ತಮ್ಮದೇ ದಾಖಲೆಯನ್ನ ಮುರಿದಿದ್ದಾರೆ.
ಜೂನ್ ತಿಂಗಳ ಆರಂಭದಲ್ಲಿ ಫಿನ್‌ಲ್ಯಾಂಡ್ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.30 ಮೀ. ಜಾವೆಲಿನ್ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು. ಇದೀಗ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ತನ್ನದೇ ಆದ ದಾಖಲೆಯನ್ನು ಮುರಿದಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಎರಡು ಬಾರಿ ದಾಖಲೆ ಮುರಿದಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿ ಮುಂದುವರೆಯುತ್ತಿರುವ ಚೋಪ್ರಾ ದಾಖಲೆಗಳ ವೀರ ಎಂದೇ ಹೇಳಬಹುದು. ಇನ್ನು 90ರ ಗಡಿ ತಲುಪಲು ಕೇವಲ ಆರು ಸೆಂಟಿ ಮೀಟರ್ ಅಂತರ ಬಾಕಿ ಇತ್ತು.
PublicNext
01/07/2022 05:41 pm