ಜರ್ಮನಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಯಶಸ್ವಿ ಚಿಕಿತ್ಸೆ ಬಳಿಕ ಈಗ ಕೆ.ಎಲ್.ರಾಹುಲ್ ಚೇತರಿಸಿಕೊಳ್ಳುತ್ತಿದ್ದಾರೆ.
Groin Injury (ತೊಡೆಸಂದು ಗಾಯ) ದಿಂದಲೆ ಕೆ.ಎಲ್.ರಾಹುಲ್,ದಕ್ಷಿಣ ಆಫ್ರಿಕಾದ T20 ಸರಣಿ ಪಂದ್ಯದಿಂದ ಹೊರ ಬಿದ್ದಿದ್ದರು. ಈಗ ಇಂಗ್ಲೆಂಡ್ ಪ್ರವಾಸದಿಂದಲೂ ರಾಹುಲ್ ರೂಲೌಟ್ ಆಗಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಸ್ವತಃ ರಾಹುಲ್ ಟ್ವಿಟ್ ಮಾಡಿದ್ದಾರೆ. ತಾವು ಚೇತರಿಸಿಕೊಳ್ತಿರೋದಾಗಿಯೂ ಬರೆದುಕೊಂಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಒಂದು ಫೋಟೋ ಕೂಡ ಹಂಚಿಕೊಂಡಿದ್ದಾರೆ. ನಿಮ್ಮ ಹಾರೈಕೆಗೆ ಧನ್ಯವಾದ ಅಂತಲೂ ತಿಳಿಸಿದ್ದಾರೆ.
PublicNext
30/06/2022 11:00 am