ಶ್ರೀಲಂಕಾ ವಿರುದ್ಧ ಎರಡನೇ ಮಹಿಳಾ T20 ಸರಣಿ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಐದು ವಿಕೆಟ್ ಗಳ ಮೂಲಕ ಗೆಲವು ಸಾಧಿಸಿದೆ.
ಭಾರತದ ಮಹಿಳಾ ತಂಡ ಈಮೂಲಕ ಸರಣಿಯ 2-0 ಗೆಲುವು ಸಾಧಿಸಿದೆ. ಶ್ರೀಲಂಕಾ ತಂಡ ಟ್ಯಾಸ್ ಗೆದ್ದು ಬ್ಯಾಟಿಂಗ್ ಮಾಡಿದೆ. 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತ್ತು ಶ್ರೀಲಂಕಾ ತಂಡ.
ಈ ಮೊತ್ತವನ್ನ ಬೆನ್ನಟ್ಟಿದ ಭಾರತದ ಮಹಿಳಾ ತಂಡ, 19.1 ಓವರ್ ನಲ್ಲಿಯೇ ಗುರಿ ತಲುಪಿ, ಐದು ವಿಕೆಟ್ ಕಳೆದುಕೊಂಡು
ಗೆಲುವಿನ ನಗೆ ಬೀರಿದೆ.
ಭಾರತದ ಪರ ಶಫಾಲಿ ವರ್ಮಾ-17,ಸ್ಮೃತಿ ಮಂದನಾ-39,ಮೇಘನಾ 17, ಹರ್ಮನ್ ಪ್ರೀತ್‌ಕೌರ್ 31 ರನ ಹೊಡೆದು ಗೆಲವಿಗೆ ಕಾರಣರಾದರು.
PublicNext
25/06/2022 05:20 pm