ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: 2 ಬಾರಿ ಪಿಚ್​ನಿಂದ ಹೊರಗೆ ಬಾಲ್ ಎಸೆದ ಬೌಲರ್‌- ಸಿಟ್ಟಿನಲ್ಲಿ ಸಿಕ್ಸರ್ ಸಿಡಿಸಿದ ಬಟ್ಲರ್

ಆಮ್‌ಸ್ಟರ್‌ಡ್ಯಾಮ್: ನೆದರ್ಲೆಂಡ್ಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಎರಡು ಬಾರಿ ಪಿಚ್​ನಿಂದ ಹೊರಗಡೆ ಬಂದ ಬಾಲ್‌ ಅನ್ನು ಇಂಗ್ಲೆಂಡ್ ವಿಕೆಟ್ ಕೀಪರ್, ಬ್ಯಾಟರ್ ಜೋಸ್ ಬಟ್ಲರ್ ಸಿಕ್ಸರ್ ಸಿಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಮನಮೋಹಕ ಬ್ಯಾಟಿಂಗ್ ಸಹಾಯದಿಂದ ಇಂಗ್ಲೆಂಡ್ ತಂಡವು ನೆದರ್ಲೆಂಡ್ಸ್ ವಿರುದ್ಧ 3-0 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಆಂಗ್ಲರು ದಾಖಲೆಯ 232 ರನ್​ಗಳ ಗೆಲುವು ಕಂಡರೆ, ದ್ವಿತೀಯ ಕದನದಲ್ಲಿ 6 ವಿಕೆಟ್​ಗಳ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ 8 ವಿಕೆಟ್​ಗಳ ಜಯ ಸಾಧಿಸಿತು. ಅದರಲ್ಲೂ ಬುಧವಾರ ಜರುಗಿದ ಮೂರನೇ ಏಕದಿನ ಪಂದ್ಯದಲ್ಲಿ ಬಟ್ಲರ್ 64 ಎಸೆತಗಳಲ್ಲಿ ಅಜೇಯ 86 ರನ್ ಸಿಡಿಸಿ ಮಿಂಚಿದರೆ, ಜೇಸನ್ ರಾಯ್ ಅಜೇಯ 101 ರನ್ ಕಲೆಹಾಕಿ ಜೇಸನ್ ರಾಯ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Edited By : Vijay Kumar
PublicNext

PublicNext

23/06/2022 03:56 pm

Cinque Terre

33.88 K

Cinque Terre

0

ಸಂಬಂಧಿತ ಸುದ್ದಿ