ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಸ್ಟ್ ಕ್ರಿಕೆಟ್ ನಲ್ಲಿ ಹೀನಾಯ ದಾಖಲೆಗೆ ಪಾತ್ರವಾದ ಬಾಂಗ್ಲಾದೇಶ

ಆಂಟಿಗುವಾ: ಇತ್ತೀಚಿನ ಹಲವು ವರ್ಷಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ತನ್ನದೆ ಆದ ಪಾರುಪತ್ಯ ಸಾಧಿಸುತ್ತ ಬರುತ್ತಿದೆ. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಟೆಸ್ಟ್ ಇತಿಹಾಸದಲ್ಲಿ ಅತಿಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದೆ. ಆಂಟಿಗುವಾದ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವ ಉಭಯ ರಾಷ್ಟ್ರಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ 6 ಆಟಗಾರರು ಶೂನ್ಯಕ್ಕೆ ಔಟ್ ಆಗುವ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ 6 ಆಟಗಾರರು ಶೂನ್ಯ ಸುತ್ತಿದ ವಿಶ್ವದ ಮೊದಲ ತಂಡ ಎಂಬ ಕುಖ್ಯಾತಿಗೆ ಬಾಂಗ್ಲಾದೇಶ ಪಾತ್ರವಾಗಿದೆ.

ಪಂದ್ಯದ ಮೊದಲ ದಿನವೇ ಬಾಂಗ್ಲಾದೇಶ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ತಂಡದ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ಉಳಿಯಲಿಲ್ಲ. ಇದರಿಂದಾಗಿ ತಂಡವು ಇತಿಹಾಸದ ಪುಟಗಳಲ್ಲಿ ಹೆಸರು ಮಾಡಿದೆ. ಬಾಂಗ್ಲಾದೇಶದ ಆರು ಆಟಗಾರರು ಸೊನ್ನೆ ಸುತ್ತಿ ವಿಕೆಟ್ ಕಳೆದುಕೊಂಡರು.

ಬಾಂಗ್ಲಾದ ಮೊಹಮ್ಮದುಲ್ಲಾ, ಶ್ಯಾಂಟ್ನೊ, ಮೋಮಿನುಲ್ಲಾ, ನೂರುಲ್ಲ ಹಸನ್, ಮುಸ್ತಾಫಿಜುರ್, ಕಲೀದ್ ಅಹಮ್ಮದ್, ಈ ಆರು ಆಟಗಾರರು ಸೊನ್ನೆ ಸುತ್ತುವ ಮೂಲಕವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ಸೊನ್ನೆ ಸುತ್ತಿದ ಆಟಗಾರರ ಕುಖ್ಯಾತಿಗೆ ಬಾಂಗ್ಲಾದೇಶ ತಂಡ ಸೇರ್ಪಡೆಯಾಗಿದೆ.

Edited By : Nirmala Aralikatti
PublicNext

PublicNext

17/06/2022 06:07 pm

Cinque Terre

24.09 K

Cinque Terre

3